ಹೊಸಪೇಟೆ(ವಿಜಯನಗರ): ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ನಗರದಲ್ಲಿ ಅವರ ಪುತ್ಥಳಿ ಸ್ಥಾಪಿಸಬೇಕು ಎಂಬ ಕೂಗು ಅಭಿಮಾನಿಗಳಿಂದ ಕೇಳಿ ಬಂದಿದೆ.

ಈ ಸಂಬಂಧ ಬುಧವಾರ ಸಂಜೆ ನಗರದ ಮುನ್ಸಿಪಲ್ ಮೈದಾನದಲ್ಲಿ ಸಭೆ ಸೇರಿದ ನೂರಾರು ಜನ ಪುನೀತ್ ಅಭಿಮಾನಿಗಳು ಪುತ್ಥಳಿ ಸ್ಥಾಪನೆಗೆ ಒಕ್ಕೊರಲಿನಿಂದ ಆಗ್ರಹಿಸಿದರು.

‘ಪುನೀತ್ ರಾಜಕುಮಾರ್ ಹೊಸಪೇಟೆಯೊಂದಿಗೆ ವಿಶೇಷ ನಂಟು ಹೊಂದಿದ್ದರು. ಹೋದಲೆಲ್ಲಾ ಹೊಸಪೇಟೆಯ ಉಲ್ಲೇಖ ಮಾಡುತ್ತಿದ್ದರು. ಅಭಿಮಾನಿಗಳನ್ನು ನೆನೆಯುತ್ತಿದ್ದರು. ಚಿತ್ರೀಕರಣಕ್ಕೆ ಹೊಸಪೇಟೆ ಸುತ್ತಮುತ್ತ ಬಂದರೆ ಅಭಿಮಾನಿಗಳ ಮನೆಗೂ ಭೇಟಿ ನೀಡುತ್ತಿದ್ದರು. ಅವರ ‘ದೊಡ್ಮನೆ ಹುಡ್ಗ’ ಚಿತ್ರದ ಹಾಡಿನ ಚಿತ್ರೀಕರಣ ಇದೇ ಮೈದಾನದಲ್ಲಿ ನಡೆದಿದೆ. ಅವರ ಪುತ್ಥಳಿ ಸ್ಥಾಪಿಸಿ ಅವರಿಗೆ ಗೌರವ ಸಮರ್ಪಿಸುವ ಅಗತ್ಯವಿದೆ’ ಎಂದು ಸಭೆಯಲ್ಲಿ ಪ್ರತಿಪಾದಿಸಿದರು.

ಗುಜ್ಜಲ್ ರಘು ಮಾತನಾಡಿ, ‘ಪುನೀತ್ ಸ್ಮರಣಾರ್ಥ ನಗರದ ಆಸ್ಪತ್ರೆ, ಜಿಲ್ಲಾ ಕ್ರೀಡಾಂಗಣ ಅಥವಾ ಯಾವುದಾದರೂ ಕಟ್ಟಡಕ್ಕೆ ಪುನೀತ್ ರಾಜ್‌ಕುಮಾರ್ ಎಂದು ನಾಮಕರಣ ಮಾಡಬೇಕು. ವೃತ್ತವೊಂದಕ್ಕೆ ಅವರ ಹೆಸರನ್ನಿಟ್ಟು ಪುತ್ಥಳಿ ನಿರ್ಮಿಸಬೇಕು. ಈ ಸಂಬಂಧ ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಪುನೀತ್ ಅಭಿಮಾನಿ ವಿಶ್ವ ಮಾತನಾಡಿ, ‘ಉದ್ಯಾನವನಕ್ಕೆ ಪುನೀತ್ ಹೆಸರು ಇಟ್ಟು ನಿರ್ವಹಣೆ ಮಾಡದೆ ಕೈಬಿಡುವುದರ ಬದಲು ನಗರದ ಹೃದಯ ಭಾಗದಲ್ಲಿ ಯಾವುದಾದರೂ ವೃತ್ತಕ್ಕೆ ಅವರ ಹೆಸರಿಡಬೇಕು. ಅಲ್ಲಿ ಅವರ ಪುತ್ಥಳಿ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.