ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ: ಬೆಳೆ ರಕ್ಷಣೆಗೆ ಟ್ಯಾಂಕರ್ ನೀರಿಗೆ ಮೊರೆ

ಚಾಂದ್‌ಭಾಷ
Published 2 ಜನವರಿ 2024, 4:49 IST
Last Updated 2 ಜನವರಿ 2024, 4:49 IST
ಅಕ್ಷರ ಗಾತ್ರ

ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಸಿರುಗುಪ್ಪ ತಾಲ್ಲೂಕಿನಲ್ಲಿ ಮಳೆಯಾಗಿಲ್ಲ. ಕಾಲುವೆ ನೀರು ಮರೀಚಿಕೆ ಆಗಿದೆ. ಮೆಣಸಿನಕಾಯಿ ಬೆಳೆದ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ತಾಲ್ಲೂಕಿನ ರಾರಾವಿ, ಚಾಣಕನೂರು, ಬಗ್ಗೂರು, ಕರ್ಚಿಗನೂರು, ಕುಡುದರ ಹಾಳು, ಬಿಜಿದಿನ್ನಿ, ಕೊತ್ತಲಚಿಂತ ಸೇರಿ ವಿವಿಧ ಗ್ರಾಮಗಳ ರೈತರು ಟ್ಯಾಂಕರ್ ನೀರು ಅವಲಂಬಿಸಿದ್ದಾರೆ. ನಾಡಂಗ, ಅಗಸನೂರು, ಬೊಮ್ಮಲಾಪುರ, ಬಿ.ಎಂ. ಸೂಗೂರು, ಇಟಗಿಹಾಳ್ ಗ್ರಾಮಗಳಲ್ಲಿ ರೈತರು ಕೃಷಿಹೊಂಡದ  ನೀರನ್ನು ಒದಗಿಸುತ್ತಿದ್ದಾರೆ.

ಬ್ಯಾಡಗಿ ಮತ್ತು ಗುಂಟೂರು ತಳಿಯ ಮೆಣಸಿನಕಾಯಿ ಬೆಳೆಗೆ ಕಳೆದ ವರ್ಷ ದೊರೆತ ಉತ್ತಮ ಬೆಲೆ ಇದ್ದ ಕಾರಣ ತಾಲ್ಲೂಕಿನ ರೈತರು ಈ ಬಾರಿ 12,600 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. 1 ಎಕರೆಗೆ ಕನಿಷ್ಠ 6 ಕ್ವಿಂಟಲ್ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರಿಗೆ ನೀರಿನದ್ದೇ ಸಮಸ್ಯೆಯಾಗಿದೆ.

‘ಟ್ರ್ಯಾಕ್ಟರ್ ಬಾಡಿಗೆ ₹ 2,500, ಟ್ಯಾಂಕರ್ ಬಾಡಿಗೆ ₹800 ಮತ್ತು ಡೀಸೆಲ್ ಮೋಟರ್ ಬಾಡಿಗೆ ₹3,500 ಸೇರಿ ಒಂದು ದಿನಕ್ಕೆ ₹ 6,800 ವ್ಯಯಿಸಿ ಬೆಳೆಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು. ಒಂದು ಎಕರೆಗೆ ಕನಿಷ್ಠ 40ರಿಂದ 60 ಟ್ಯಾಂಕರ್ ನೀರು ಬೇಕು’ ಎಂದು ರೈತರು ತಿಳಿಸಿದರು.

ಕಳ್ಳರ ಕಾಟ–ಬೆಳೆಗೆ ರೋಗ:

‘ಮೆಣಸಿನಕಾಯಿ ಬೆಳೆಗೆ ರೋಗ ತಗುಲಿ, ಗಿಡಗಳು ಮುದುರಿಕೊಂಡಿದ್ದು, ಹೂ ಬಿಡುತ್ತಿಲ್ಲ. ಗಿಡಗಳ ಬೆಳವಣಿಗೆ ಆಗುತ್ತಿಲ್ಲ. ಇದರಿಂದ ಬೆಳೆ ಕೈಗೆ ಬಾರದೆ ನಷ್ಟ ಅನುಭವಿಸಂತಾಗಿದೆ’ ಎಂದು ಬೊಮ್ಮಲಾಪುರದ ರೈತ ಶ್ರೀನಿವಾಸ ಅಲವತ್ತುಕೊಂಡರು. ಈ ಮಧ್ಯೆ

ಗುಬ್ಬಿಹಾಳ, ಬೊಮ್ಮಲಾಪುರ, ಮಿಟ್ಟೆಸೂಗೂರು ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಿದೆ. ಜೊತೆಗೆ ಆಯಾ ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡು ಬೆಳೆಗಳು ಮುದುರುತ್ತಿವೆ’ ಎಂದು ಬೊಮ್ಮಲಾಪುರದ ರೈತ ಶ್ರೀನಿವಾಸ ತಿಳಿಸಿದರು.

ಬೊಮ್ಮಲಾಪುರ ಗ್ರಾಮದ ರೈತ ಶ್ರೀನಿವಾಸ ಅವರು ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿರುವುದು
ಬೊಮ್ಮಲಾಪುರ ಗ್ರಾಮದ ರೈತ ಶ್ರೀನಿವಾಸ ಅವರು ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿರುವುದು
ಈ ಬಾರಿ ಮೆಣಸಿನಕಾಯಿ ಬೆಳೆ ಬೆಳೆಯದಂತೆ ತೋಟಗಾರಿಕೆ ಇಲಾಖೆ ಸೂಚಿಸಿತ್ತು. ಆದರೂ ಸೂಚನೆ ಮೀರಿ ರೈತರು ಈ ಬೆಳೆ ಬೆಳೆದಿದ್ದು ನೀರಿನ ಕೊರತೆ ಎದುರಿಸುವಂತಾಗಿದೆ
ಖಾದರ್ ಭಾಷ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT