ಬಳ್ಳಾರಿ: ನಗರದಲ್ಲಿ ಡಿಜಿಟಲ್ ಅರೆಸ್ಟ್ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ₹88 ಲಕ್ಷ ಪಡೆದು ವಂಚಿಸಲಾಗಿದೆ. ಈ ಕುರಿತು ವ್ಯಕ್ತಿಯು ನಗರದ ‘ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ಪೊಲೀಸ್ ಠಾಣೆ’ಗೆ ದೂರು ನೀಡಿದ್ದು, ಜುಲೈ 24ರಂದು ಎಫ್ಐಆರ್ ದಾಖಲಾಗಿದೆ.

ನಿವೃತ್ತ ಸಿವಿಲ್ ಗುತ್ತಿಗೆದಾರರಾಗಿರುವ ಸಂತ್ರಸ್ತ ವ್ಯಕ್ತಿಗೆ ಜುಲೈ 5ರಂದು ಹಲವು ನಂಬರ್ಗಳಿಂದ ಕರೆ, ವಿಡಿಯೊ ಕರೆಗಳು ಬಂದಿವೆ. ಆ ಕಡೆಯಿಂದ ಮಾತನಾಡಿದವರು, ತಾವು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ.

ಜೆಟ್ ಏರ್ವೇಸ್ನ ನರೇಶ್ ಗೊಯೇಲ್ ₹200 ಕೋಟಿ ಅವ್ಯವಹಾರ ಮಾಡಿದ್ದಾರೆ. ಅವರ ನಿವಾಸದಲ್ಲಿ ನಿಮ್ಮ ಎಟಿಎಂ ಕಾರ್ಡ್ ಸಿಕ್ಕಿದೆ. ಆ ಕಾರ್ಡ್ನಿಂದ ₹2 ಕೋಟಿ ವರ್ಗಾವಣೆ ಆಗಿದೆ. ಅದಕ್ಕೆ ನೀವು ₹25 ಲಕ್ಷ ಕಮಿಷನ್ ಪಡೆದಿದ್ದೀರಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡಿಕೊಂಡಿದ್ದೀರಿ. ನಿಮ್ಮನ್ನು ಬಂಧಿಸುತ್ತೇವೆ ಎಂದು ನಕಲಿ ಬಂಧನ ವಾರೆಂಟ್ ಅನ್ನು ವಾಟ್ಸಾಪ್ಗೆ ರವಾನಿಸಿದ್ದಾರೆ.

ಜುಲೈ 7ರಂದು ಮತ್ತೆ ಕರೆ ಮಾಡಿದ್ದ ವಂಚಕರು ನಿಮ್ಮನ್ನು ಮುಂಬೈನ ಸಿಬಿಐ ನ್ಯಾಯಾಧೀಶರ ಎದುರು ಹಾಜರುಪಡಿಸುತ್ತಿದ್ದೇವೆ. ವಿಚಾರಣೆ ನಡೆಯುವವರೆಗೆ ನಾವು ಹೇಳಿದ ಬ್ಯಾಂಕ್ಗಳಲ್ಲಿ ಹಣ ಠೇವಣಿ ಇಡಬೇಕು ಎಂದು ತಿಳಿಸಿದ್ದಾರೆ. ಜುಲೈ 19ರ ವರೆಗೆ ಹಂತ ಹಂತವಾಗಿ ₹88,20,098 ಹಾಕಿಸಿಕೊಂಡಿದ್ದಾರೆ.

ಇದು ವಂಚನೆ ಎಂದು ತಿಳಿದ ವ್ಯಕ್ತಿ ಪೊಲೀಸರಿಗೆ ದೂರಿದ್ದಾರೆ. ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.