ತೆಕ್ಕಲಕೋಟೆ : ಸಮೀಪದ ಕೆಂಚನಗುಡ್ಡ ಗ್ರಾಮದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ 10 ಜನರಿಗೆ ಹುಚ್ಚು ನಾಯಿ ಕಡಿದ ಘಟನೆ ನಡೆದಿದೆ.
ಕೆ. ತಾಂಡ ಗ್ರಾಮದ ಗಣೇಶ ವಿಸರ್ಜನೆಗಾಗಿ ಕೆಂಚನಗುಡ್ಡ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ತೆರಳುವ ಸಂದರ್ಭದಲ್ಲಿ ಹುಚ್ಚುನಾಯಿ ಏಕಾವಕಿ ಗುಂಪಿನ ಮೇಲೆ ದಾಳಿ ಮಾಡಿದೆ.
ಕೆಂಚನಗುಡ್ಡ ಗ್ರಾಮದ ಲಕ್ಷ್ಮಿ, ಕುಪ್ಪಯ್ಯ, ಶಿವಕುಮಾರ, ಕೆ. ತಾಂಡ ಗ್ರಾಮದ ಲಕ್ಷ್ಮಿ ಸೇವಿಯಪ್ಪ , ಗಂಗಾ ನಾಯ್ಕ, ರವಿನಾಯ್ಕ, ಸರಸ್ವತಿ, ಗಣೇಶ, ತಿರುಮಲೇಶಹಾಗೂ ಹೆರಕಲ್ಲು ಗ್ರಾಮದ ಕಾಡಿಸಿದ್ದ ಹುಚ್ಚು ನಾಯಿ ಕಡಿತಕ್ಕೆ ಒಳಗಾದವರು.
ಗುರುವಾರ ಸಿರುಗುಪ್ಪ ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಈರಣ್ಣ ಗ್ರಾಮಕ್ಕೆ ಭೇಟಿ ನೀಡಿ ನಾಯಿ ಕಡಿತಕ್ಕೊಳಗಾದವರ ಆರೋಗ್ಯ ವಿಚಾರಿಸಿದರು.
ಇದೇ ಸಂದರ್ಭದಲ್ಲಿ ಕೆಂಚನಗುಡ್ಡ ಗ್ರಾಮದ ಪಂಚಾಯಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿ, ಸಾಕುನಾಯಿ ಸಾಕು ಪ್ರಾಣಿಗಳಿಂದ ಆದಷ್ಟು ದೂರ ಇರುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ಡೆಂಗಿ ಪ್ರಕರಣ ಕಂಡುಬಂದ ಮನೆಯ ಸುತ್ತಲಿನ 100 ಮನೆಗಳ ಒಳಾಂಗಣ ಧೂಮೀಕರಣ ಮಾಡುವಂತೆ ಸೂಚಿಸಿದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರಾಜರೆಡ್ಡಿ, ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಘವೇಂದ್ರ, ಸಮುದಾಯ ಆರೋಗ್ಯ ಅಧಿಕಾರಿ ಹುಸೇನ್ ಭಾಷ, ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ ಶಿವಗಂಗಮ್ಮ ಹಾಗೂ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.