ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‍ನಲ್ಲಿ ನೀರಿನ ಬವಣೆ: ಆರೋಪ

Published 12 ಮೇ 2024, 14:41 IST
Last Updated 12 ಮೇ 2024, 14:41 IST
ಅಕ್ಷರ ಗಾತ್ರ

ಕಂಪ್ಲಿ: ಸ್ಥಳೀಯ 15ನೇ ವಾರ್ಡ್ ಜೈನ ಮಂದಿರ ಓಣಿಯ ಜನರು ಕೆಲ ದಿನಗಳಿಂದ ನೀರಿನ ಬವಣೆ ಎದುರಿಸುತ್ತಿದ್ದಾರೆ.

ಎರಡು ದಿನಕ್ಕೊಮ್ಮೆ ಒಂದು ತಾಸು ಮಾತ್ರ ನೀರು ಪೂರೈಸುತ್ತಿದ್ದು, ಪ್ರತಿ ಕುಟುಂಬಕ್ಕೆ ಸಾಕಾಗುವಷ್ಟು ನೀರು ಲಭ್ಯವಾಗುತ್ತಿಲ್ಲ. ನೀರಿಗಾಗಿ ವಾರ್ಡ್‍ನಲ್ಲಿ ಪರದಾಟ ಮುಂದುವರಿದಿದೆ.

ಕನಿಷ್ಠ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಪುರಸಭೆಗೆ ಮನವಿ ಮಾಡಿದರು ನಿರ್ಲಕ್ಷಿಸಲಾಗಿದೆ. ಇದೇ ಧೋರಣೆ ಮುಂದುವರಿದಲ್ಲಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅಲ್ಲಿನ ನಿವಾಸಿಗಳಾದ ಕೊಟ್ರಪ್ಪ, ಪ್ರಕಾಶ್, ಗುರು, ಶಾಂತಾ, ಶಶಿಕಲಾ, ಸುಶೀಲಮ್ಮ, ಕಮಲಮ್ಮ, ಸಿದ್ಧಮ್ಮ ಎಚ್ಚರಿಸಿದ್ದಾರೆ.

ಈ ಕುರಿತು ಪುರಸಭೆ ಎಂಜಿನಿಯರ್ ಮೇಘನಾ ಮಾತನಾಡಿ, ಮೇ.9ಕ್ಕೆ ನೀರು ಪೂರೈಸಲಾಗಿತ್ತು. ನಂತರ ಮೇ.11ಕ್ಕೆ ನೀರು ಪೂರೈಸಬೇಕಿತ್ತು. ಆದರೆ, ಅಂದು ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯದಿಂದ ಪೂರೈಸಿಲ್ಲ. ಮೇ. 13ರಂದು ನೀರು ಪೂರೈಕೆಗೆ ಕ್ರಮ ತೆಗೆದುಕೊಂಡಿರುವುದಾಗಿ ಸ್ಪಷ್ಟಪಡಿಸಿದರು.

ಮಹಾರಾಣಾ ಪ್ರತಾಪ್‍ಸಿಂಗ್ ದೇಶಭಕ್ತಿ ಎಲ್ಲರಿಗೆ ಆದರ್ಶ

ಕಂಪ್ಲಿ: ಮಹಾರಾಣಾ ಪ್ರತಾಪ್‍ಸಿಂಗ್ ಅವರ ಬಲಿದಾನ ತ್ಯಾಗ ಧರ್ಮನಿಷ್ಠೆ ದೇಶಭಕ್ತಿ ನಮಗೆಲ್ಲ ಆದರ್ಶಪ್ರಾಯ ಎಂದು ಕಂಪ್ಲಿ ತಾಲ್ಲೂಕು ರಜಪೂತ್ ಸಮಾಜದ ಅಧ್ಯಕ್ಷ ಇಂದ್ರಜಿತ್‍ಸಿಂಗ್ ತಿಳಿಸಿದರು.

ಸ್ಥಳೀಯ ವಿಜಯನಗರ ಜೋಗಿ ಕಾಲುವೆ ಬಳಿಯ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಂಪ್ಲಿ ರಜಪೂತ್ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪ್‍ಸಿಂಗ್ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಪಟ್ಟಣದ ವೃತ್ತ ರಸ್ತೆ ಬಡಾವಣೆಗಳಿಗೆ ಮಹಾರಾಣ ಪ್ರತಾಪ್‍ಸಿಂಗ್ ಅವರ ಹೆಸರು ನಾಮಕರಣ ಮಾಡಬೇಕು. ರಜಪೂತ್ ಸಮುದಾಯ ಭವನಕ್ಕೆ ನಿವೇಶನ ಒದಗಿಸುವಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

ಕಂಪ್ಲಿ ರಜಪೂತ್ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಾರುತಿಸಿಂಗ್ ಪದಾಧಿಕಾರಿಗಳಾದ ಉದಯ್ ಸಿಂಗ್ ಕಿಶನ್‍ಸಿಂಗ್ ಮಾರುತಿಸಿಂಗ್ ಉದಯ್‍ಸಿಂಗ್ ಭವಾನಿಸಿಂಗ್ ಹರಿಸಿಂಗ್ ಲಕ್ಷ್ಮಣ್‍ಸಿಂಗ್ ರತನ್‍ಸಿಂಗ್ ಉಮೇಶ್‍ಸಿಂಗ್ ಸೇರಿದಂತೆ ರಜಪೂತ್ ಸಮಾಜದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT