ಹರಪನಹಳ್ಳಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧೀನದಲ್ಲಿ ಹರಪನಹಳ್ಳಿಯಲ್ಲಿ ನೂತನ ಸ್ನಾತಕೋತ್ತರ ಕೇಂದ್ರ ಆರಂಭಿಸುವ ಕುರಿತು ಪರಿಶೀಲಿಸಲು ಕುಲಸಚಿವ ಅವರು ಪರಿಶೀಲನಾ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.
ಸಮಿತಿಯ ಅಧ್ಯಕ್ಷರಾಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಆರ್. ಸಜ್ಜನ್, ಸಮಿತಿಯ ಸದಸ್ಯರಾಗಿ ಸಿಂಡಿಕೇಟ್ ಸದಸ್ಯರು ಆಗಿರುವ ರಮೇಶ್ ಭೂಪಾಲ್, ಟಿ.ಎಂ. ರಾಜಶೇಖರ, ಸದಸ್ಯ ಕಾರ್ಯದರ್ಶಿಯಾಗಿ ಆರ್. ತಿಪ್ಪೇರುದ್ರಪ್ಪ ಅವರನ್ನು ಒಳಗೊಂಡಿರುವ ಸಮಿತಿ ರಚಿಸಲಾಗಿದೆ.
ನ. 11 ರಂದು ಹರಪನಹಳ್ಳಿಗೆ ಬೇಟಿ ನೀಡಿ ಸ್ನಾತಕೋತ್ತರ ತೆರೆಯುವ ಸಂಬಂಧ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಆದೇಶದಲ್ಲಿ ಕುಲಸಚಿವ ಡಾ.ರುದ್ರೇಶ್ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.