ಹೂವಿನಹಡಗಲಿ: ಪಟ್ಟಣದ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯ ಪ್ರತ್ಯೇಕ ಎಕ್ಸ್ಪ್ರೆಸ್ ಫೀಡರ್ ಲೈನ್ಗೆ ಕೊಕ್ಕೆ ಹಾಕಿ ಅಕ್ರಮ ವಿದ್ಯುತ್ ಪಡೆಯುತ್ತಿದ್ದ ಸಂಪರ್ಕಗಳನ್ನು ಜೆಸ್ಕಾಂ ಸಿಬ್ಬಂದಿ ಸೋಮವಾರ ತೆರವುಗೊಳಿಸಿದ್ದಾರೆ.

ಕುಡಿಯುವ ನೀರಿನ ಯೋಜನೆಗೆ ನಿರಂತರ ವಿದ್ಯುತ್ ಸೌಲಭ್ಯ ಪಡೆಯಲು ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನಲ್ಲಿರುವ ಜಾಕ್ವೆಲ್ ಹಾಗೂ ಹೊನ್ನೂರು ಬಳಿ ಇರುವ ಶುದ್ಧೀಕರಣ ಘಟಕಕ್ಕೆ ಪ್ರತ್ಯೇಕ ಎಕ್ಸ್ಪ್ರೆಸ್ ಲೈನ್ ಹಾಕಲಾಗಿತ್ತು. ಕೆಲ ಭೂ ಮಾಲೀಕರು ಇದಕ್ಕೆ ಕೊಕ್ಕೆ ಹಾಕಿ ಪಂಪ್ ಸೆಟ್ಗಳಿಗೆ ದಶಕದಿಂದಲೂ ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದರು. ಈ ಅಕ್ರಮಕ್ಕೆ ಜೆಸ್ಕಾಂ ಸಿಬ್ಬಂದಿ ಕೈ ಜೋಡಿಸಿದ್ದರು’ ಎಂಬ ಆರೋಪ ಕೇಳಿ ಬಂದಿತ್ತು.

ಶಾಸಕ ಕೃಷ್ಣನಾಯ್ಕ, ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಅವರು ಶನಿವಾರ ಪುರಸಭೆ ಹಾಗೂ ಜೆಸ್ಕಾಂ ಸಿಬ್ಬಂದಿಯ ಸಭೆ ನಡೆಸಿ, ಅಕ್ರಮ ಸಂಪರ್ಕಗಳ ತೆರವಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

‘ಕುಡಿಯುವ ನೀರಿನ ಯೋಜನೆ ಸಲುವಾಗಿ ನಿರಂತರ ವಿದ್ಯುತ್ ಸರಬರಾಜಿನ ಪ್ರತ್ಯೇಕ ಲೈನ್ ಹಾಕಲಾಗಿದೆ. ಈ ಲೈನ್ನಿಂದ ಖಾಸಗಿ ವ್ಯಕ್ತಿಗಳು ಅಕ್ರಮ ಸಂಪರ್ಕ ಪಡೆದರೂ ಏಕೆ ಕಣ್ಣುಮುಚ್ಚಿ ಕುಳಿತುಕೊಂಡಿದ್ದೀರಿ’ ಎಂದು ಕಾರ್ಯಪಾಲಕ ಎಂಜಿನಿಯರ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಅಕ್ರಮ ಸಂಪರ್ಕಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.

‘ಹೊನ್ನೂರು ಬಳಿ ಎಕ್ಸ್ ಪ್ರೆಸ್ ಲೈನ್ನಿಂದ ಸಂಪರ್ಕ ಪಡೆದಿದ್ದ ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸಿದ್ದೇವೆ. ಅಗತ್ಯಕ್ಕೆ ತಕ್ಕಂತೆ ಪ್ರತ್ಯೇಕ ಲೈನ್ ಹಾಕಿಕೊಡುತ್ತೇವೆ’ ಎಂದು ಜೆಸ್ಕಾಂ ಎಇಇ ಕೇದಾರನಾಥ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.