ಬಳ್ಳಾರಿ: ‘ಗುಡ್ ಫ್ರೈಡೇ’ ಅನ್ನು ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನಗರದ ವಿವಿಧ ಚರ್ಚ್ಗಳಲ್ಲಿ ಯೇಸು ಸ್ಮರಣೆ ಮಾಡಿ, ಪ್ರಾರ್ಥನಾ ಗೀತೆಗಳನ್ನು ಹಾಡಿ ಗುಡ್ ಫ್ರೈಡೇ ದಿನದ ಮಹತ್ವ ಸಾರಲಾಯಿತು.

ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ– ಸಂಶೋಧನಾ ಕೇಂದ್ರ (ವಿಮ್ಸ್) ಬಳಿ ಇರುವ ಮೇರಿ ಮಾತಾ ಚರ್ಚ್ನಲ್ಲಿ ಗುಡ್ ಫ್ರೈಡೇ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಯೇಸುವಿನ ಕೃಪೆಗೆ ಪಾತ್ರರಾದರು.

‘ಗುಡ್ ಫ್ರೈಡೇ ಜಗತ್ತಿಗೆ ಸತ್ಯ ಮಾರ್ಗ ಹಾಗೂ ಶಾಂತಿಯ ಸಂದೇಶ ಸಾರುತ್ತದೆ. ಶಿಲುಬೆಗೇರಿದ ಯೇಸು ಎಲ್ಲಾ ಯಾತನೆಯನ್ನು ತಾವೇ ಅನುಭವಿಸಿದರು. ಶಿಲುಬೆಗೇರಿಸಿದವರನ್ನೂ ಕ್ಷಮಿಸಿದರು. ಗುಡ್ ಫ್ರೈಡೇ ಸತ್ಯ, ಶಾಂತಿ, ಐಕ್ಯತೆ ಹಾಗೂ ಕ್ಷಮೆಯ ಮಹತ್ವದ ಕುರಿತು ಸಂದೇಶ ನೀಡುತ್ತದೆ’ ಎಂದು ಬಳ್ಳಾರಿಯ ಆರೋಗ್ಯ ಮಾತಾ ದೇವಾಲಯದ ಮುಖ್ಯಗುರು ಫಾದರ್ ನಾಥನ್ ಅವರು ಗುಡ್ ಫ್ರೈಡೇ ಮಹತ್ವ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.