ಹಗರಿಬೊಮ್ಮನಹಳ್ಳಿ: ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅಪಾರವಾದದ್ದು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಭೀಮಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಮಡಿವಾಳರ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಶರಣ ಮಾಚಿದೇವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಮತ, ಲಿಂಗ ಬೇಧವನ್ನು ತಿರಸ್ಕರಿಸಿದ ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಮಾಚಿದೇವರು ತಮ್ಮನ್ನು ತೊಡಿಗಿಸಿಕೊಂಡರು, ವಚನ ಸಾಹಿತ್ಯದ ಹಸ್ತಪ್ರತಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದ ಇವರು ಅನುಭವ ಮಂಟಪದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು. ಪ್ರತಿಯೊಬ್ಬರೂ ಮಾಚಿದೇವರ ತತ್ವ ಮತ್ತು ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಎನ್.ನಾಗರಾಜ, ಟಿ.ಮಂಜುನಾಥ, ಗ್ರಾಮದ ಮುಖಂಡರಾದ ಜಿ.ತಿಮ್ಮಣ್ಣ, ಮೀಸೆ ಹುಲುಗಪ್ಪ, ಸಿ.ಶಿವನಾಗಪ್ಪ, ಕೆ.ನಾಗಪ್ಪ, ಡಿ.ಹನುಮಂತಪ್ಪ, ಕೆ.ಹುಲುಗಪ್ಪ, ಮಡಿವಾಳರ ರಾಮಪ್ಪ, ಕಾಳಪ್ಪ, ಎಂ.ಮಹಾಂತೇಶ್, ಎಂ.ನಾಗರಾಜ, ಎಂ.ಲಕ್ಷ್ಮಣ, ಎಂ.ಶ್ರೀಧರ್, ಎಂ.ದುರುಗಪ್ಪ, ಯಮುನಪ್ಪ, ರಾಮಣ್ಣ, ಶ್ರೀನಿವಾಸ್, ಪ್ರಕಾಶ್, ಟಿ.ಮಂಜುನಾಥ, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.