ಹರಪನಹಳ್ಳಿ: ಇಲ್ಲಿಯ ಜೆಎಂಎಫ್ ನ್ಯಾಯಾಲಯದ ಆವಣರದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಅನ್ವಯ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 1,257 ಪ್ರಕರಣ ಇತ್ಯರ್ಥಗೊಂಡವು.
ನ್ಯಾಯಧೀಶೆ ಉಷಾರಾಣಿ ಆರ್. ನೇತೃತ್ವದಲ್ಲಿ ಎರಡು ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 890 ಪ್ರಕರಣಗಳ ಪೈಕಿ ₹59,42 ಲಕ್ಷ ಮೌಲ್ಯದ 645 ಪ್ರಕರಣಗಳು,ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ 775 ಪ್ರಕರಣಗಳ ಪೈಕಿ ₹18,25 ಲಕ್ಷ ಮೌಲ್ಯದ 612 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಹೆಚ್ಚುವರಿ ಸರ್ಕಾರಿ ವಕೀಲ ಕೆ. ಜಗದಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಸಿ. ಪೀರ್ ಅಹಮ್ಮದ್, ಕಾರ್ಯದರ್ಶಿ ಎಚ್.ಎಂ. ಕೇಶವಮೂರ್ತಿ, ಖಜಾಂಚಿ ಹೂಲೆಪ್ಪ, , ಸರ್ಕಾರಿ ಅಭಿಯೋಜಕಿ ಮಿನಾಕ್ಷಿ ಎನ್., ನಿರ್ಮಲ, ಸಿಬ್ಬಂದಿ ನಾಗರಾಜ್, ನಟರಾಜ್, ಉಜ್ವಲ, ಕೋಟ್ರೇಶ್, ಬಸವರಾಜ್ ಇದ್ದರು.