ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ | 4 ಮನೆ ಕುಸಿತ: ಬೆಳೆ ಹಾನಿ

Published : 20 ಆಗಸ್ಟ್ 2024, 15:55 IST
Last Updated : 20 ಆಗಸ್ಟ್ 2024, 15:55 IST
ಫಾಲೋ ಮಾಡಿ
Comments

ತೆಕ್ಕಲಕೋಟೆ: ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೆ ಸುರಿದ ಮಳೆಯಿಂದಾಗಿ ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಮುರಿದ ಹಾಗೂ ಮನೆ ಕುಸಿದ ಘಟನೆಗಳು ನಡೆದಿವೆ.

ತೆಕ್ಕಲಕೋಟೆ ಪಟ್ಟಣದ 5ನೇ ವಾರ್ಡಿನ ಮುಂದಲಮನೆ ಶಾಂತಮ್ಮ, ಹಳೆಕೋಟೆ ಗ್ರಾಮದ ನಾಗಮ್ಮ ಇವರ ವಾಸದ ಮನೆ ಬಿದ್ದಿದೆ. ಸಿರಿಗೇರಿ ಗ್ರಾಮದಲ್ಲಿ ಎರಡು ಮನೆ ಬಿದ್ದಿವೆ. ಈ ಕುರಿತು ಪಿಡಿಒ ಮತ್ತು ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಪ್ಪಾರ ಹೊಸಳ್ಳಿ ಗ್ರಾಮದಲ್ಲಿ ಎರಡು ವಿದ್ಯುತ್ ಕಂಬ ಮುರಿದಿದ್ದು ಹಳೇಕೋಟೆ ಗ್ರಾಮದಲ್ಲಿ ಟ್ರಾನ್ಸ್ ಫಾರ್ಮರ್ ಸುಟ್ಟಿದೆ ಎಂದು ಜೆಇ ಯಲ್ಲಪ್ಪ ತಿಳಿಸಿದ್ದಾರೆ.

ಹಾಗಲೂರು, ಅರಳಿಗನೂರು, ಉಪ್ಪಾರ ಹೊಸಳ್ಳಿ ಎಂ.ಸುಗೂರು, ಮುದ್ದಟನೂರು ಗ್ರಾಮಗಳಲ್ಲಿ ಜೋಳ, ಹತ್ತಿ ಸಜ್ಜೆ ಹಾಗೂ ತೆಕ್ಕಲಕೋಟೆ ವ್ಯಾಪ್ತಿಯ ಭತ್ತದ ಗದ್ದೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಎಸ್ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ತೆಕ್ಕಲಕೋಟೆ ಪಟ್ಟಣದ 5ನೇ ವಾರ್ಡಿನ ಮುಂದಲಮನೆ ಶಾಂತಮ್ಮ ಅವರ ವಾಸದ ಮನೆ ಬಿದ್ದಿರುವುದು
ತೆಕ್ಕಲಕೋಟೆ ಪಟ್ಟಣದ 5ನೇ ವಾರ್ಡಿನ ಮುಂದಲಮನೆ ಶಾಂತಮ್ಮ ಅವರ ವಾಸದ ಮನೆ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT