ತೆಕ್ಕಲಕೋಟೆ: ‘ಸ್ವಉದ್ಯೋಗಕ್ಕೆ ಬ್ಯಾಂಕುಗಳ ನೀಡುವ ಬಡ್ಡಿ ರಹಿತ ಸಾಲ ಪಡೆದು, ಸಕಾಲಕ್ಕೆ ಮರುಪಾವತಿಸಿ ಸ್ವಾವಲಂಬಿಗಳಾಗಬೇಕು' ಎಂದು ಜಿಲ್ಲಾ ಸಂಘಟನಾಧಿಕಾರಿ ಗಾದಿಲಿಂಗನಗೌಡ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಬಳ್ಳಾರಿ ವತಿಯಿಂದ ಗುರುವಾರ ನಡೆದ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ 3ನೇ ಹಂತದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಹನುಮೇಶ ಎಂ.ಆರ್. ಮಾತನಾಡಿ, ‘ಬೀದಿಬದಿ ವ್ಯಾಪಾರಸ್ಥರಿಗೆ ಪಿ.ಎಂ. ಸ್ವನಿಧಿ ಯೋಜನೆಯಡಿ ಪ್ರಥಮ ಆದ್ಯತೆಯಾಗಿ ಸಾಲ ನೀಡುತ್ತಿದ್ದು, ಬೀದಿಬದಿ ವ್ಯಾಪಾರಿಗಳು ಇದರ ಪ್ರಯೋಜನ ಪಡೆಯಬೇಕು' ಎಂದು ಹೇಳಿದರು.

‘ಪಿ.ಎಂ ಸ್ವನಿಧಿ ಸಮೃದ್ಧಿ ಯೋಜನೆಯಡಿ ಪಟ್ಟಣದ 868 ಬೀದಿಬದಿ ವ್ಯಾಪಾರಿಗಳು ನೋಂದಾಯಿತರಾಗಿದ್ದು, 518 ಜನ ಸಾಲ ಯೋಜನೆಯ ಪ್ರಯೋಜನ ಪಡೆದಿದ್ದಾರೆ’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಬಳ್ಳಾರಿ ಜಿಲ್ಲಾ ಕೌಶಲ ತಜ್ಞರು ಸೌಮ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರಶುರಾಮ, ಆರೋಗ್ಯ ನಿರೀಕ್ಷಣಾಧಿಕಾರಿ ಬಿ ಅನ್ನಪೂರ್ಣ, ಸಹಾಯಕ ಇಂಜಿನಿಯರ್ ಸುನಂದ, ಕಂದಾಯ ನಿರೀಕ್ಷಕ ಸುಬ್ರಹ್ಮಣ್ಯಂ, ಮೇಲ್ವಿಚಾರಕ ಹಸೇನ್ ಬಾಷ, ಖಾದರ್ ವಲಿ, ಹುಲಿಗೆಮ್ಮ, ರೇಷ್ಮಾ, ವೀಣಾಕುಮಾರಿ ಹಾಗೂ ಪಟ್ಟಣದ ಬೀದಿಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.