ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ ಇಂದು

ಪಟ್ಟಣದಲ್ಲಿ ಮನೆಮಾಡಿದ ಸಂಭ್ರಮ|
Published : 14 ಮಾರ್ಚ್ 2025, 8:15 IST
Last Updated : 14 ಮಾರ್ಚ್ 2025, 8:15 IST
ಫಾಲೋ ಮಾಡಿ
Comments
ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನದ ಗೋಪುರವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಿರುವುದು
ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನದ ಗೋಪುರವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಿರುವುದು
ರಥೋತ್ಸವದಲ್ಲಿ ಸ್ವತ್ತಿನ ಅಪರಾಧ ನಡೆಯದಂತೆ ನುರಿತ ಸಿಬ್ಬಂದಿ ತಂಡ ರಚಿಸಲಾಗಿದೆ. ಜಾತ್ರೆಗಳಲ್ಲಿ ಸರಕಳ್ಳತನ ಮಾಡಿ ಸಿಕ್ಕಿಬಿದ್ದವರ ಭಾವಚಿತ್ರ ಪ್ರಕಟಿಸಿದೆ. ಹೆಚ್ಚು ಜನರು ಸೇರುವ ಆಯಕಟ್ಟಿನ 25 ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ
ವಿಶ್ವನಾಥ ಕೆ. ಹಿರೇಗೌಡರ್ ಸಿಪಿಐ ಕುರುಗೋಡು
ಜಿಲ್ಲೆಯ ಅತಿ ದೊಡ್ಡ ರಥೋತ್ಸವ ಕುರುಗೋಡಿನಲ್ಲಿ ಜರುಗಲಿದೆ. ಸುಗಮ ಸಂಚಾರಕ್ಕೆ ಪಟ್ಟಣದ ನಾಲ್ಕು ದಿಕ್ಕುಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬಂದೋಬಸ್ತ್‌ಗಾಗಿ ಹೆಚ್ಚುವರಿ ಸಿಬ್ಬಂದಿ ಬಳಸಿಕೊಳ್ಳಲಾಗುವುದು
ಸುಪ್ರಿತ್ ವಿರೂಪಾಕ್ಷಪ್ಪ ಪಿಎಸ್‌ಐ ಕುರುಗೋಡು
ಭಾವೈಕ್ಯದ ರಥೋತ್ಸವ‌
ಪಟ್ಟಣದಲ್ಲಿ ವಿವಿಧ ಜಾತಿಯ ಜನರು ವಾಸವಿದ್ದರೂ ದೇವಸ್ಥಾನದ ಕೆಲಸಗಳು ಮತ್ತು ರಥ ಕಟ್ಟುವ ಕಾರ್ಯದಲ್ಲಿ ಎಲ್ಲ ಜನಾಂಗದವರು ತಮ್ಮ ಕುಲ ವೃತ್ತಿಗೆ ಸಂಬಂಧಿಸಿದ ಸೇವೆ ಸಲ್ಲಿಸಿ ಭಾವೈಕ್ಯತೆ ಮೆರೆಯುತ್ತಾರೆ. ಕೆರೆಕೆರೆ ಸೋಮಲಾಪುರ ಮತ್ತು ಮುಷ್ಟಗಟ್ಟೆ ಗ್ರಾಮಗಳ ವಾಲ್ಮೀಕಿ ಸಮಾಜದವರು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಬಂದು ದೂಳಿಗಾಯಿ ಮತ್ತು ಕುಂಭ ಸಮರ್ಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯುವ ಸಂಪ್ರದಾಯವಿದೆ. 60 ಅಡಿ ಎತ್ತರದ ರಥ ಎಳೆಯುವ ಎಂಟು ದಿನ ಮೊದಲು ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಜನರು ಜಾತ್ರೆಗೆ ತಂಡೋಪ ತಂಡವಾಗಿ ಬರುತ್ತಿದ್ದು ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಪಾರ್ಕಿಂಗ್‌ಗೆ ವ್ಯವಸ್ಥೆ 
ಬಳ್ಳಾರಿ ಕಡೆಯಿಂದ ಬರುವ ವಾಹನಗಳಿಗೆ ನೀರಾವರಿ ಇಲಾಖೆ ಎದುರುಗಡೆಯ ಈದ್ಗಾ ಮೈದಾನದ ಬಯಲು ಸ್ಥಳ ಗೆಣಿಕೆಹಾಳು ಕಡೆಯವರಿಗೆ ಐಒಸಿ ಪೆಟ್ರೋಲ್ ಬಂಕ್ ಮುಷ್ಟಗಟ್ಟೆ ಕಡೆಯವರಿಗೆ ಸಂಗಮೇಶ್ವರ ದೇವಸ್ಥಾನದ ಬಯಲು ಕಂಪ್ಲಿ ಕಡೆಯಿಂದ ಬರುವವರಿಗೆ ಜಯದೇವ ಗೌಡರ ಮನೆ ಹತ್ತಿರದ ಬಯಲು ಮತ್ತು ಬಾದನಹಟ್ಟಿ ಕಡೆಯಿಂದ ಬರುವವರಿಗೆ ಹೋಟೆಲ್ ಸಾಗರ್ ಪಕ್ಕದ ಸ್ಥಳದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT