ಕುರುಗೋಡು: ದೃಷ್ಟಿ ಹಾಯಿಸಿದಷ್ಟು ಬಗೆಬಗೆಯ ಹೂವು, ಹಣ್ಣುಗಳು.. ಕಲಾವಿದರ ಕೈಚಳಕದಿಂದ ತರಕಾರಿಗಳಲ್ಲಿ ಅರಳಿದ ವಿವಿಧ ಕಲಾಕೃತಿಗಳು.. ಮಧ್ಯದ ಗೋಪುರ, ದೊಡ್ಡಬಸವೇಶ್ವರ ಮೂರ್ತಿ.. ನೋಡುಗರನ್ನು ತಮ್ಮತ್ತ ಆಕರ್ಷಿಸಿದವು.

ಕುರುಗೋಡು ಉತ್ಸವದ ಅಂಗವಾಗಿ ಕಂಪ್ಲಿರಸ್ತೆಯ ಬಯಲು ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆವತಿಯಿಂದ ಸೋಮವಾರ ಜರುಗಿದ ಫಲಪುಷ್ಟ ಪ್ರದರ್ಶನದಲ್ಲಿ ಈ ರಮ್ಯ ದೃಶ್ಯ ಕಂಡುಬಂದಿತು.

ಶಿವಮೊಗ್ಗದ ಕಲಾವಿದ ಹರೀಶ್ ಮತ್ತು ತಂಡದವರ ಕೈಯಲ್ಲಿ ವಿವಿಧ ಬಣ್ಣದ 15 ಸಾವಿರ ಸೇವಂತಿಗೆ ಹೂಗಳಲ್ಲಿ ಅರಳಿದ ದೇವಸ್ಥಾನದ ಗೋಪುರ ಮತ್ತು ದೊಡ್ಡಬಸವೇಶ್ವರ ಸ್ವಾಮಿ ಕಲಾಕೃತಿ ಫಲ, ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ ಜನರ ಮನಸೂರೆಗೊಳಿಸಿತು.

ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ ಜೆ.ಶಂಕರ್, ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ ವಸಂತ್ ಮತ್ತು ತಂಡದ ಸದಸ್ಯರು ಜರ್ಬರಾ, ಗುಲಾಬಿ, ಡೈರೆ, ಚೆಂಡು ಹೂ, ಕನಕಾಂಬರ, ಮಲ್ಲಿಗೆ, ಲಿಲ್ಲಿ, ಅಲಸ್ಟ್ರೊಮೆರಿಯಾ, ಆಸ್ಟರ್, ಸೇವಂತಿಗೆ, ದಾಸವಾಳ ಹೂಗಳನ್ನು ಬಳಸಿ ತಯಾರಿಸಿದ ಪತಂಗ ಮತ್ತು ಇತರೇ ಕಲಾಕೃತಿಗಳು, ರಂಗೋಲಿಯಲ್ಲಿ ಮೂಡಿಬಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ, ದಿ.ಪುನೀತ್ ರಾಜ್ ಕುಮಾರ್, ತೋಟಗಾರಿಕೆ ಪಿತಾಮಹ ಎಂ.ಎಚ್. ಮರೇಗೌಡ ಅವರ ಭಾವ ಚಿತ್ರಗಳು. ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರತಿಕೃತಿಗಳು ಮೆರುಗು ಹೆಚ್ಚಿಸಿದವು.

ಪ್ರದರ್ಶನದ ವೀಕ್ಷೆಣೆಗೆ ಬಂದಿದ್ದ ಸಾರ್ವಜನಿಕರು, ವಿದ್ಯಾರ್ಥಿಗಳು ಹೂಗಳಿಂದ ನಿರ್ಮಿಸಿದ ಕಲಾಕೃತಿಗಳ ಅಂದವನ್ನು ಕಣ್ತುಂಬಿಕೊಂಡರು. ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ಅವುಗಳೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದ ದೃಶ್ಯ ಕಂಡುಬಂದಿತು.

ಫಲ, ಪುಷ್ಪ ಪ್ರದರ್ಶನದ ಪಕ್ಕದಲ್ಲಿಯೇ ಹಾಕಿದ್ದ ಸ್ಟಾಲ್ಗಳಲ್ಲಿ ಪ್ರದರ್ಶನಗೊಂಡ ಸಿರಿಧಾನ್ಯಗಳು, ಸ್ತೀಶಕ್ತಿ ಸ್ವಸಹಾಯ ಗುಂಪಿನ ಸದಸ್ಯರು ತಯಾರಿಸಿದ ಆಹಾರ ಪದಾರ್ಥಗಳು, ಕೃಷಿ ಇಲಾಖೆಯ ಕೃಷಿ ಯಂತ್ರೋಪಕರಣ, ಮೀನುಗಾರಿಕೆ ಮತ್ತು ಪಶುಸಂಗೋಪನೆ ಇಲಾಖೆಯ ಯೋಜನೆಗಳ ಕುರಿತು ಪರಿಚಯ ಫಲಕಗಳು ಗಮನಸೆಳೆದವು.

ಶಾಸಕ ಜೆ.ಎನ್. ಗಣೇಶ್ ಪ್ರದರ್ಶನಕ್ಕೆ ಚಾಲನೆ ನೀಡಿದರು.

ನರಸಪ್ಪ ತಹಶೀಲ್ದಾರ್, ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸ್ಐ ಸುಪ್ರಿತ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗರ್ಜೆಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.