ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಾನಸಿಕ ನೆಮ್ಮದಿಗೆ ಪುರಾಣ ಕೇಳಿ’

Published 25 ಮೇ 2024, 15:38 IST
Last Updated 25 ಮೇ 2024, 15:38 IST
ಅಕ್ಷರ ಗಾತ್ರ

ಕುರುಗೋಡು: ‘ಆರ್ಥಿಕವಾಗಿ ಸಬಲರಾಗಿದ್ದರೂ ಮಾನಸಿಕವಾಗಿ ದುರ್ಬಲರಾಗಿರುವ ಮನುಷ್ಯ ಪಾಪ ಕರ್ಮಗಳ ಫಲವಾಗಿ ಅಸುಖಿಯಾಗಿ ಬದುಕುತ್ತಿದ್ದಾನೆ’ ಎಂದು ಸೂಳೆಕಲ್ಲು ಬೃಹನ್ಮಠದ ಪದ್ಮಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗುತ್ತಿರುವ 6ನೇ ವರ್ಷದ ಗುಡುದೂರು ದೊಡ್ಡಬಸವೇಶ್ವರ ಪುರಾಣ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಜರುಗಿದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಒತ್ತಡದ ಬದುಕು ನಮ್ಮ ಜೀವನವನ್ನು ಯಾಂತ್ರೀಕರಣಗೊಳಿಸಿದೆ. ಜಂಜಾಟದಿಂದ ಮುಕ್ತಿ ಪಡೆದು ನೆಮ್ಮದಿ ಜೀವನ ಸಾಗಿಸಲು ಪುರಾಣ ಪುಣ್ಯಕಥೆಗಳ ಶ್ರವಣ ಮಾಡಬೇಕು’ ಎಂದರು.

ಇದೇ ಸಂದರ್ಭದಲ್ಲಿ 56 ಮಹಿಳೆಯರಿಗೆ ಉಡಿತುಂಬಿದರು. ಕೊಟ್ಟೂರು ದೇಶಿಕರು ಭಕ್ತಿಗೀತೆಗಳನ್ನು ಹಾಡಿ ಗಮನ ಸೆಳೆದರು.

ಷಡಾಕ್ಷರಿ ಸ್ವಾಮಿ ಪುರಾಣ ಪ್ರವಚನ ನೀಡಿದರು. ಪ್ರಭುಲಿಂಗನ ಗೌಡ ಪುರಾಣ ವಾಚಿಸಿದರು. ಕೊಂಚಿಗೇರಿ ಶಿವಯ್ಯ ಸಂಗೀತ ಸೇವೆ ಸಲ್ಲಿಸಿದರು. ಶೇಖರಯ್ಯ ಸ್ವಾಮಿ ತಬಲಾ ಸಾಥ್ ನೀಡಿದರು. ಭೀಮನ ಗೌಡ ಮತ್ತು ಜಡೆಯಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT