‘ಇದಂತೂ ವರ್ಸ್ಟ್ ಇದೆ ನೋಡಿ
ಆಸ್ಪತ್ರೆಯಲ್ಲಿ ಕುಡಿಯುವ ಉದ್ದೇಶಕ್ಕೆ ಮತ್ತು ಶೌಚಾಲಯಕ್ಕೆ ನೀರು ಪೂರೈಸುವ ಓವರ್ ಹೆಡ್ ಟ್ಯಾಂಕ್‌ಗಳ ಸ್ಥಿತಿ ಕಂಡು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆ ಮೇಲಿನ ಓವರ್ ಹೆಡ್ ಟ್ಯಾಂಕ್‌ಗಳನ್ನು ಖುದ್ದು ವೀಕ್ಷಿಸಿದ ಅವರು ‘ಇದಂತೂ ವರ್ಸ್ಟ್ ಇದೆ ನೋಡಿ... ಟ್ಯಾಂಕ್‌ಗಳನ್ನು ತೊಳೆಸುವುದಿಲ್ಲವೇ, ನೀರನ್ನು ಪರೀಕ್ಷೆಗೆ ಕಳುಹಿಸಿದಲ್ಲವೇ, ಟ್ಯಾಂಕ್ ತುಂಬ ಮಣ್ಣು, ಪಾಚಿ ಇದೆ. ಮನೆಗಳ ಟ್ಯಾಂಕ್‌ಗಳನ್ನೇ ಆರು ತಿಂಗಳಿಗೊಮ್ಮೆ ಶುಚಿಗೊಳಿಸಲಾಗುತ್ತದೆ. ಆಸ್ಪತ್ರೆ ಟ್ಯಾಂಕ್‌ಗಳನ್ನು ನಿಯಮಿತವಾಗಿ ತೊಳೆಸುತ್ತಿರಬೇಕಲ್ಲವೇ’ ಎಂದು ಪ್ರಶ್ನೆ ಮಾಡಿದರು. ಈ ಪ್ರಶ್ನೆಗಳಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ನಿರುತ್ತರರಾಗಿ ನಿಂತಿದ್ದು ಕಂಡುಬಂತು.