ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವದ ಅಂಗವಾಗಿ ಮತ್ಸ್ಯ ಮೇಳ

Last Updated 28 ಜನವರಿ 2023, 14:13 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ): ಮತ್ಸ್ಯ ಲೋಕ ಕಣ್ತುಂಬಿಕೊಳ್ಳಬೇಕಾದರೆ ಸಾಗರದಾಳಕ್ಕೆ ಹೋಗಬೇಕು. ಆದರೆ, ವಿಜಯನಗರ ಜಿಲ್ಲಾಡಳಿತವು ಅದನ್ನು ಹಂಪಿಯಲ್ಲಿ ಸಾಧ್ಯವಾಗಿಸಿದೆ.

ಹಂಪಿ ಉತ್ಸವದ ಅಂಗವಾಗಿ ಇಲ್ಲಿನ ಮಾತಂಗ ಪರ್ವತದ ಬೀದಿಯಲ್ಲಿ ಮೀನುಗಾರಿಕೆ ಇಲಾಖೆಯು ಮತ್ಸ್ಯ ಮೇಳ ಆಯೋಜಿಸಿದ್ದು, ವಿವಿಧ ಪ್ರಭೇದದ ಮೀನುಗಳನ್ನು ನೋಡುವ ಸದಾವಕಾಶ ಸಾರ್ವಜನಿಕರಿಗೆ ಲಭಿಸಿದೆ.

ಕಾಮನಬಿಲ್ಲು ನೆನಪಿಸುವ ಬಣ್ಣದ ಮೀನು, ಆಕಾಶದಲ್ಲಿ ಮಿನುಗುವ ನಕ್ಷತ್ರದಂತೆ ಹೊಳೆಯುವ ಮೀನು ಎಲ್ಲರನ್ನೂ ಆಕರ್ಷಿಸಿದವು. ಟೈಗರ್ ಬಾರ್ಬರ್ ಫಿಶ್, ವೆಂಟಿಕೋರ್, ಟೈಗರ್ ಆಸ್ಕರ್, ಸಿಲ್ವರ್ ಡಾಲರ್, ಸ್ನಾಬನ್ ರೆನ್, ಫ್ಯಾನ್ ಟೈಲ್ ಗೋಲ್ಡ್, ಥಾಯ್ಲೆಂಡ್‌ ಆಲ್ ಬಿನೋ ಆಸ್ಕರ್, ಅಮೆಜಾನ್ ನದಿಯಲ್ಲಿರುವ ಡಿಸ್ಕಸ್, ಬ್ಲ್ಯಾಕ್ ಗೋಸ್ಟ್ ಮೀನುಗಳನ್ನು ಮಕ್ಕಳು ನೋಡಿ ಸಂಭ್ರಮಿಸಿದರು. ‘ಅಮ್ಮಾ ಅಲ್ನೊಡು ಆ ಮೀನು ಹೇಗಿದೆ, ಇಲ್ನೊಡು ಈ ಮೀನು ಹೇಗಿದೆ’ ಎಂದು ಉದ್ಘಾರ ತೆಗೆದರು.

ನೀಲಿ ತಿಮಿಂಗಿಲ, ಟಿನ್ ಫಾಯಿಲ್, ರೆಡ್ ಅಲ್ ಗೌರಮಿ, ವಿಡೋ ಟೆಟ್ರ, ಫ್ಯಾನ್ಸಿ ಗುಪ್ಪೀಸ್ ಸೇರಿ ವಿವಿಧ ದೇಶದ 60 ತಳಿಯ ಮೀನುಗಳು ಅಕ್ವೇರಿಯಂನಲ್ಲಿ ಗಮನ ಸೆಳೆದವು. ಮೀನುಗಾರರ ಬಲೆ, ತೆಪ್ಪ, ರಕ್ಷಾ ಕವಚಗಳು, ಮೀನುಗಾರಿಕೆ ಇಲಾಖೆಯ ಯೋಜನೆಗಳು, ಮೀನು ಸಾಕಾಣಿಕೆ ಕ್ರಮ, ಆಹಾರ ಪದ್ಧತಿ, ಆಮ್ಲಜನಕ ವ್ಯವಸ್ಥೆ, ಮಾರುಕಟ್ಟೆಯ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಫಲಕ ಅಳವಡಿಸಲಾಗಿತ್ತು.

ಮರಳು ಶಿಲ್ಪ ಆಕರ್ಷಣೆ:

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮಾತಂಗ ಪರ್ವತ ಬೀದಿಯಲ್ಲಿ 70 ಟನ್ ರಾಶಿ ಮರಳಿನಲ್ಲಿ ಒಡಮೂಡಿರುವ ಪುರಂದರದಾಸರು, ದಿವಂಗತ ನಟ ಡಾ.ಪುನೀತ್ ರಾಜಕುಮಾರ, ಜಿ–20 ಶೃಂಗಸಭೆ, ಕಡಲೆಕಾಳು ಗಣಪ, ಯಂತ್ರೋದ್ಧಾರಕ, ದರೋಜಿ ಕರಡಿಧಾಮದ ಮರಳು ಶಿಲ್ಪಗಳು ಒಡಿಶಾದ ಕಲಾವಿದರಾದ ನಾರಾಯಣ್ ಶಾಹು ಮತ್ತು ಓಂ ಪ್ರಕಾಶ್ ಅವರ ಕೈಯಲ್ಲಿ ಅರಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT