ತೋರಣಗಲ್ಲು: ಪಂಜಾ ಪ್ರತಿಷ್ಠಾಪನೆಯನ್ನು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವಂತಿಲ್ಲ. ಸಾರ್ವಜನಿಕರು ಮೊಹರಂ ಆಚರಣೆ ವೇಳೆ ಕಡ್ಡಾಯವಾಗಿ ಕೋವಿಡ್-19 ನಿಯಮಗಳನ್ನು ಪಾಲಿಸಬೇಕು ಎಂದು ಕುಡುತಿನಿ ಠಾಣೆಯ ಪಿಎಸ್‍ಐ ಮೊಹಮ್ಮದ್ ರಫಿ ಹೇಳಿದರು.

ಸಮೀಪದ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರು ಅಲಾಯಿಕುಣಿ ತೆಗೆಯುವಂತಿಲ್ಲ. ಕುಣಿಯಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಿ ಕುಣಿಯುಂತಿಲ್ಲ. ಅಲ್ಲದೆ ತಾಶಾ, ಡೋಲುಗಳನ್ನು ಬಾರಿಸುವಂತಿಲ್ಲ. ಮಸೀದಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು. ಮಸೀದಿ ಮೆಲ್ವಿಚಾರಕರು ಪೂಜಾ ಸಮಯದಲ್ಲಿ ಕೋವಿಡ್ ನಿಯಮಗಳ ಬಗ್ಗೆ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಮೂರನೇ ಅಲೆಯು ಗಡಿ ರಾಜ್ಯಗಳಲ್ಲಿ ತೀವ್ರಗತಿಯಲ್ಲಿ ಹರಡುವುದರಿಂದ ಪಟ್ಟಣದ ಜನರು ಸುರಕ್ಷತೆಯೊಂದಿಗೆ ಕೋವಿಡ್ ನಿಯಮಗಳ ಮೊಹರಂ ಅನ್ನು ಸರಳವಾಗಿ ಆಚರಿಸಬೇಕು ಎಂದು ಹೇಳಿದರು.

ಕುಡುತಿನಿ, ಹೊಸದರೋಜಿ, ಹಳೆದರೋಜಿ, ಮಾದಾಪುರ, ಏಳುಬೆಂಚಿ, ತಿಮ್ಮಾಲಾಪುರ, ವೇಣಿವೀರಾಪುರ ಮಾವಿನಹಳ್ಳಿ ಸೇರಿದಂತೆ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.

ಅಪರಾಧ ವಿಭಾಗದ ಪಿಎಸ್‍ಐ ಸುರೇಶ್, ಪಂಚಾಯ್ತಿ ಸದಸ್ಯರಾದ ಜಿ.ಎಸ್. ವೆಂಕಟರಮಣ ಬಾಬು, ಮಂಜುನಾಥ್, ಕೆ.ಪಂಪಾಪತಿ, ದುಗ್ಗೇಪ್ಪ, ಮುಖಂಡರಾದ ಚಂದ್ರಾಯಿ ದೊಡ್ಡಬಸಪ್ಪ, ದೊಡ್ಡಪ್ಪ, ಮಾದಾಪುರ ಮಾರಪ್ಪ, ಮಲಿಯಪ್ಪ, ಏಳುಬೆಂಚಿ ಅಂಬಣ್ಣ, ಜಂಗ್ಲಿಸಾಬ್, ತಿಮ್ಮಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.