ಬಳ್ಳಾರಿ: ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಯಾವುದೇ ನಿಷೇಧಿತ ವಸ್ತುಗಳು, ಮೊಬೈಲ್ ನುಸುಳದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಕಾರಾಗೃಹದ ಅಧೀಕ್ಷಕಿ ಆರ್.ಲತಾ ಸ್ಪಷ್ಟನೆ ನೀಡಿದ್ದಾರೆ.

ಬಳ್ಳಾರಿ ಕೇಂದ್ರ ಕಾರಾಗೃಹದದಲ್ಲಿ ಕೈದಿಗಳು ವಿಲಾಸಿ ಜೀವನ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬುಧವಾರ ಹರಿದಾಡಿದ್ದವು. ಈ ಕುರಿತು ಮಾತನಾಡಿದ ಅವರು, ‘ಈ ಕಾರಾಗೃಹದಲ್ಲಿ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಇದ್ದು, ಅವರನ್ನು ಭದ್ರತೆ ದೃಷ್ಟಿಯಿಂದ ಹೊರವಿಶೇಷ ಭದ್ರತೆಯಲ್ಲಿರಿಸಲಾಗಿದೆ. ಬಂಧಿಗಳು ಬೇರೆ ಕಾರಾಗೃಹಕ್ಕೆ ವರ್ಗಾವಣೆ ಕೋರಿದ್ದರು. ನ್ಯಾಯಾಲಯದಿಂದ ವರ್ಗಾವಣೆಯು ತಿರಸ್ಕಾರವಾಗಿದೆ. ಈ ಹಿನ್ನೆಲೆಯಲ್ಲಿ ಬಂಧಿಗಳು ಕಾರಾಗೃಹದಲ್ಲಿ ಸಿಬ್ಬಂದಿ ಮೇಲೆ ಹಾಗೂ ಕಾರಾಗೃಹದ ಆಡಳಿತದ ವಿರುದ್ಧವಾಗಿ ವಿಡಿಯೊ ಹರಿಬಿಡುವುದಾಗಿ ಬೆದರಿಕೆ ಒಡ್ಡಿದ್ದರು’ ಎಂದಿದ್ದಾರೆ.

ದೃಶ್ಯಾವಳಿಗಳಲ್ಲಿರುವ ಕೈದಿಗಳು ಬಹಳ ಹಿಂದೆಯೇ ಬಿಡುಗಡೆ ಹೊಂದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.