ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಿಗದಿಯಾಗಿತ್ತು.
.ಬಳ್ಳಾರಿ | ರಾಬಕೊವಿ ಗದ್ದುಗೆಗೆ ಚುನಾವಣೆ .ರಾಬಕೊವಿ ಒಕ್ಕೂಟಕ್ಕೆ ಶಾಸಕ ಹಿಟ್ನಾಳ ಅಧ್ಯಕ್ಷ?.
ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಸತ್ಯನಾರಾಯಣ ಮಾತ್ರವೇ ನಾಮಪತ್ರ ಸಲ್ಲಿಸಿದರು.

ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ, ಬಳ್ಳಾರಿ ಉಪವಿಭಾಗಾಧಿಕಾರಿ ಪ್ರಮೋದ್ ಘೋಷಿಸಿದರು.

ಕೆಎಂಎಫ್ನ ಮಾಜಿ ಅಧ್ಯಕ್ಷ ಭೀಮ ನಾಯ್ಕ ಚುನಾವಣೆಯಿಂದ ದೂರ ಉಳಿದರು.

ಒಕ್ಕೂಟದ ಒಟ್ಟು 12 ನಿರ್ದೇಶಕ ಸ್ಥಾನಗಳಲ್ಲಿ ಹಿಟ್ನಾಳ್ 7 ಮತ್ತು ಭೀಮ ನಾಯ್ಕ 5 ನಿರ್ದೇಶಕರ ಬಲ ಹೊಂದಿದ್ದರು.

ಇದರ ಜತೆಗೆ ಸರ್ಕಾರ ಹಿಟ್ನಾಳ್ ಅವರನ್ನು ಒಕ್ಕೂಟಕ್ಕೆ ಎರಡು ದಿನಗಳ ಹಿಂದಷ್ಟೇ ನಾಮನಿರ್ದೇಶನ ಮಾಡಿತ್ತು. ಹೀಗಾಗಿ ಹಿಟ್ನಾಳ್ ಸಂಖ್ಯಾ ಬಲ 8ಕ್ಕೆ ಏರಿತ್ತು.

ಇದು ಮಾತ್ರವೇ ಅಲ್ಲದೇ ಹಿಟ್ನಾಳ್ಗೆ ಬಳ್ಳಾರಿಯ ಕೆಲ ಶಾಸಕರು ಮತ್ತು ಮುಖ್ಯಮಂತ್ರಿಯ ಬೆಂಬಲ ಇತ್ತು.

ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಹಿಟ್ನಾಳ್ ಬಣದ ನಿರ್ದೇಶಕರಿಗೆ ಆತಿಥ್ಯ ವಹಿಸಿದ್ದರು.
.ಸಿಎಂ ಅಂಗಳದಲ್ಲಿ ರಾಬಕೊವಿ ಪಟ್ಟ: ಮತಗಳ ಲೆಕ್ಕಾಚಾರದಲ್ಲಿ ಹಿಟ್ನಾಳ್ ಬಣದ ಮೇಲುಗೈ.ರಾಬಕೊವಿ: ಸಮಬಲದ ಫಲಿತಾಂಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.