ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಮಾಜಿ ಶಾಸಕ ಭೀಮನಾಯ್ಕ ಮತ್ತು ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರ ಹೆಸರುಗಳು ಕೇಳಿಬರುತ್ತಿವೆ.

ಅಧ್ಯಕ್ಷ ಗಾಧಿಗಾಗಿ ಈ ಮೂವರೂ ತಮ್ಮದೇ ಮಾರ್ಗದಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅಂತಿಮವಾಗಿ ಈ ಚರ್ಚೆ ಮುಖ್ಯಮಂತ್ರಿ ಅಂಗಳ ತಲುಪಿದ್ದು, ಮೂವರಲ್ಲಿ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರೇ ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ, ಇತ್ತೀಚೆಗಷ್ಟೇ ರಾಬಕೊವಿಯ ಸದಸ್ಯರಾಗಿ ನಾಮನಿರ್ದೇಶಿತಗೊಂಡಿದ್ದ ಹಂಪಯ್ಯ ಅವರನ್ನು ತೆಗೆದು ರಾಘವೇಂದ್ರ ಹಿಟ್ನಾಳ್ ಅವರನ್ನು ನಾಮನಿರ್ದೇಶನ ಮಾಡಲಾಗುತ್ತಿದೆ ಎಂಬ ಸುದ್ದಿ ದಟ್ಟವಾಗಿದೆ. ಇದನ್ನು ಗಮನಿಸಿದರೆ ಹಿಟ್ನಾಳ್ ಅವರೇ ಒಕ್ಕೂಟದ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ.

ಆದರೂ, ಭೀಮನಾಯ್ಕ ಮಾತ್ರ ಸುಮ್ಮನೆ ಕುಳಿತಿಲ್ಲ. ಬಳ್ಳಾರಿ ಜಿಲ್ಲೆಯ ನಾಯಕರಿಬ್ಬರ ಬೆಂಬಲದೊಂದಿಗೆ ಅವರು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ತಾವೇ ಒಕ್ಕೂಟದ ಅಧ್ಯಕ್ಷರಾಗಬೇಕು, ಆ ಮೂಲಕ ಕೆಎಂಎಫ್ಗೆ ಪ್ರಾತಿನಿಧ್ಯ (ಡೆಲಿಗೇಷನ್) ಪಡೆದು ಅದರ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತಾವೂ ಆಕಾಂಕ್ಷಿ ಎಂದು ಭೀಮನಾಯ್ಕೆ ಹಿಂದೊಮ್ಮೆ ಹೇಳಿದ್ದರು.

ಒಟ್ಟಾಗಿರುವ ಕೊಪ್ಪಳ–ರಾಯಚೂರು: ಚುನಾವಣೆಗೂ ಮೊದಲೇ ಕೊಪ್ಪಳ–ರಾಯಚೂರಿನ ಸ್ಪರ್ಧಿಗಳು ಭೀಮನಾಯ್ಕ ಅವರ ವಿರುದ್ಧ ಒಟ್ಟಾಗಿದ್ದರು. ಚುನಾವಣೆ ಫಲಿತಾಂಶದ ಬಳಿಕವೂ ಆ ಒಗ್ಗಟು ಮುಂದುವರಿದಿದೆ. ಎರಡೂ ಜಿಲ್ಲೆಗಳಿಂದ ಗೆದ್ದಿರುವ ಒಟ್ಟು 8 ಮಂದಿ ಪೈಕಿ ಆರು ಮಂದಿ ಇಷ್ಟು ದಿನ ಒಟ್ಟಾಗಿದ್ದರು. ಈಗ ಆ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಭೀಮ ನಾಯ್ಕ ತಂಡದ ಸಂಖ್ಯೆ ಐದಕ್ಕೆ ಕುಸಿದಿದೆ ಎನ್ನಲಾಗಿದೆ.

ಕೊಪ್ಪಳ ಅಥವಾ ರಾಯಚೂರಿನವರು ಅಧ್ಯಕ್ಷರಾಗಬೇಕು ಎಂಬುದು ಎರಡೂ ಜಿಲ್ಲೆಯವರ ನಿಲುವಾಗಿದ್ದು, ಅದನ್ನೇ ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ ಎಂದು ಗೊತ್ತಾಗಿದೆ. ಈ ಮಧ್ಯೆ ಅಮರೇಗೌಡ ಬಯ್ಯಾಪುರ ಅವರ ಹೆಸರೂ ಕೇಳಿ ಬಂದಿದೆಯಾದರೂ, ಹೆಚ್ಚು ಚರ್ಚೆಯಲ್ಲಿ ಇಲ್ಲ. ಇದೇ 25ರಂದು ರಾಬಕೊವಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.

ರಾಬಕೊವಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಚರ್ಚೆಗಳು ಇನ್ನೂ ನಡೆಯುತ್ತಿವೆ. ಆದರೆ ಈ ವರೆಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ನಂತರದ ದಿನಗಳಲ್ಲಿ ಚರ್ಚಿಸುತ್ತೇನೆ.
ರಾಘವೇಂದ್ರ ಹಿಟ್ನಾಳ್ ಶಾಸಕ

ಕೆಎಂಎಫ್ ಮೇಲೆ ಹಿಟ್ನಾಳ್ ಕಣ್ಣು?

ರಾಬಕೊವಿ ನಾಮನಿರ್ದೇಶಿತ ನಿರ್ದೇಶಕರಾಗಲು ಹೊರಟಿರುವ ಕೊಪ್ಪಳದ ರಾಘವೇಂದ್ರ ಹಿಟ್ನಾಳ್ ಅಲ್ಲಿಯೇ ಅಧ್ಯಕ್ಷರಾಗಬೇಕು ಅಥವಾ ರಾಯಚೂರಿನವರಿಗೆ ಅವಕಾಶ ಮಾಡಿಕೊಟ್ಟು ಕೆಎಂಎಫ್ಗೆ ಪ್ರಾತಿನಿಧ್ಯ(ಡೆಲಿಗೇಷನ್) ಪಡೆಯಬೇಕು ಎಂಬ ಇರಾದೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದರೆ ಅವರು ಕೆಎಂಎಫ್ ಅಧ್ಯಕ್ಷ ಗಾದಿಯ ಮೇಲೆ ಕಣ್ಣು ಹಾಕಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷರ ಆಯ್ಕೆ ಹೇಗೆ?:

ರಾಬಕೊವಿ ಒಟ್ಟು ನಿರ್ದೇಶಕರ ಸಂಖ್ಯೆ 12. ಇದರ ಜತೆಗೆ ಸರ್ಕಾರದಿಂದ ನಾಮನಿರ್ದೇಶಿತ ಒಬ್ಬ ನಿರ್ದೇಶಕ ರಾಬಕೊವಿ ವ್ಯವಸ್ಥಾಪಕ ನಿರ್ದೇಶಕ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದಿಂದ (ಕೆಎಂಎಫ್) ನಿಯೋಜನೆಗೊಂಡ ಒಬ್ಬ ಅಧಿಕಾರಿ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ (ಎನ್ಡಿಡಿಬಿ) ಒಬ್ಬರು ಪಶುಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆಯಿಂದ ತಲಾ ಒಬ್ಬೊಬ್ಬರು ಸೇರಿ ಒಟ್ಟು 18 ಮಂದಿ ಮತ ಚಲಾಯಿಸಲಿದ್ದಾರೆ. ಸದ್ಯ ಚುನಾಯಿತ ನಿರ್ದೇಶಕರ ಪೈಕಿ 7 ನಾಮ ನಿರ್ದೇಶಿತ ನಿರ್ದೇಶಕ ಸೇರಿ ಒಟ್ಟು 8 ಮತಗಳನ್ನು ಹಿಟ್ನಾಳ್ ಬಣ ಹೊಂದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.