ಸಂಡೂರು: ತಾಲ್ಲೂಕಿನ ದರೋಜಿ ಕೆರೆಯ 1ನೇ ತೂಬಿನ (ಜಿನೂರು ತೂಬು) ದುರಸ್ತಿ ಕಾರ್ಯವು ಮಂಗಳವಾರ ಯಶಸ್ವಿಗೊಂಡಿದ್ದರಿಂದ ಕೆರೆಯ ವ್ಯಾಪ್ತಿಯ ಗ್ರಾಮಗಳ ರೈತಾಪಿ ಜನರು ಸಂತಸಗೊಂಡಿದ್ದಾರೆ.

ಪ್ರಾಚೀನ ಕಾಲದಲ್ಲಿ ಅಳವಡಿಸಲಾಗಿದ್ದ ಕೆರೆಯ 1ನೇ ತೂಬಿನ ಕೊಂಡಿಯು ತುಕ್ಕು ಹಿಡಿದು ಕಳಿಚಿ ಬಿದ್ದು ನೀರು ಹರಿಯುವ ಗೇಟ್ ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ರೈತರು ಕಳೆದ ಮೂರು ತಿಂಗಳಿಂದ ನೀರಿಲ್ಲದೆ ಆತಂಕಕ್ಕೆ ಒಳಗಾಗಿದ್ದರು.

ತೂಬನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ರೈತರು ಸಂಡೂರಿನ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ ಬಳಿಕ ಅಧಿಕಾರಿಗಳು ಬೆಳಗಾವಿಯಿಂದ ನುರಿತ ತಜ್ಞರನ್ನು ಕರೆಸಿ ಸುಮಾರು 25 ಅಡಿಯ ನೀರಿನಲ್ಲಿಯೇ ದುರಸ್ತಿ ಕಾರ್ಯ ನಡೆಸಿದ್ದಾರೆ.

ಕೆರೆಯ ಈ ತೂಬಿನ ವ್ಯಾಪ್ತಿಗೆ ಹಳೆದರೋಜಿ, ಸೋಮಲಾಪುರ, ಜೌಕು, ಜಿನೂರು ಗ್ರಾಮಗಳು ಒಳಪಟ್ಟಿದ್ದು, ಅಂದಾಜು 800 ಎಕರೆ ಜಮೀನುಗಳಿಗೆ ನೀರು ಹರಿಯುತ್ತದೆ. ದರೋಜಿ ಕೆರೆಯು ಐತಿಹಾಸಿಕ ಕೆರೆಯಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಅತಿದೊಡ್ಡ, ಕರ್ನಾಟಕದಲ್ಲಿಯೇ ಎರಡನೇ ದೊಡ್ಡ ಕೆರೆಯಾಗಿದೆ. ಕೆರೆಗೆ ಮೂರು ತೂಬುಗಳನ್ನು ಅಳವಡಿಸಲಾಗಿದ್ದು, ಈ ತೂಬುಗಳ ಮೂಲಕ ದರೋಜಿ ಗ್ರಾಮ ಸೇರಿದಂತೆ ಇತರೆ ಹತ್ತು ಗ್ರಾಮಗಳಿಗೆ ನೀರನ್ನು ಹರಿಸಲಾಗುತ್ತಿದೆ.

‘ಕೆರೆಯ ತೂಬು ಕೆಟ್ಟು ಮೂರು ತಿಂಗಳಾಗಿತ್ತು. ಅಧಿಕಾರಿಗಳು ಕಳಚಿ ಬಿದ್ದ ಕೊಂಡಿಯನ್ನು ಹೊರ ತೆಗೆದು ಜಮೀನುಗಳಿಗೆ ನೀರು ಹರಿಯಲು ಅವಕಾಶ ಮಾಡಿ ಕೊಟ್ಟಿರುವುದು ರೈತರಿಗೆ ಅನುಕೂಲವಾಗಿದೆ. ಕೆರೆಯಲ್ಲಿ ನೀರು ಕಡಿಮೆಯಾದ ತಕ್ಷಣ ನೂತನ ಗೇಟ್ ಅಳವಡಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಹಳೆದರೋಜಿ ಗ್ರಾಮದ ರೈತ ಎಂ.ರಾಮು ಹೇಳಿದರು.

25 ಅಡಿಯ ನೀರಿನಲ್ಲಿಯೇ ದುರಸ್ತಿ ಕಾರ್ಯ ಅಂದಾಜು 800 ಎಕರೆ ಜಮೀನುಗಳಿಗೆ ನೀರು ಬಳ್ಳಾರಿ ಜಿಲ್ಲೆಯ ಅತಿದೊಡ್ಡ ಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.