ಸಂಡೂರು: ಗುತ್ತಿಗೆ ಕಾರ್ಮಿಕರ ವೇತನ ಪರಿಷ್ಕರಣೆಯ ಕರಡು ಅಧಿಸೂಚನೆ ಅಂತಿಮಗೊಳಿಸುವುದು, ಕನಿಷ್ಠ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ನಿಗಮದ (ಬಿಟಿಪಿಎಸ್) ಗುತ್ತಿಗೆ ಕಾರ್ಮಿಕರು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮೆಟ್ರಿಕಿ ಅಂಬ್ರೇಶ್ ಮಾತನಾಡಿ, ‘ಗುತ್ತಿಗೆ ಕಾರ್ಮಿಕರು ಬಿಟಿಪಿಎಸ್ನಲ್ಲಿ ದಶಕಗಳಿಂದಲೂ ಕಡಿಮೆ ವೇತನಕ್ಕಾಗಿ ಹೆಚ್ಚು ಶ್ರಮವಹಿಸಿ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಡ ಕಾರ್ಮಿಕರ ಕುಟುಂಬಗಳ ಜೀವನ ನಿರ್ವಹಣೆಯು ಕಷ್ಟಕರವಾಗಿದ್ದು, ಸರ್ಕಾರವು ಶೀಘ್ರವಾಗಿ ವೇತನ ಪರಿಷ್ಕರಣೆ ಆದೇಶ, ಕನಿಷ್ಠ ವೇತನವನ್ನು ಸಹ ತ್ವರಿತವಾಗಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸಂಸದ ಇ.ತುಕಾರಾಂ, ಬಿಟಿಪಿಎಸ್ ಸಂಘದ ಮುಖಂಡರಾದ ಜಟಂಗಿ ಬಸವರಾಜ್, ವೆಂಕಟರೆಡ್ಡಿ, ಶೇಕ್ಷಾವಲಿ, ಪಾಂಡುರಂಗ, ರಾಘವೇಂದ್ರ, ಮುರಳಿ ಕೃಷ್ಣ, ಗೇಣಿಕಾಳಪ್ಪ, ಹನುಮಯ್ಯ, ಕೌಶಿಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.