ಬಳ್ಳಾರಿ, ಡಾ. ಜೋಳದರಾಶಿ ದೊಡ್ಡನಗೌಡರ ವೇದಿಕೆ: ಅಸ್ತಿತ್ವದ ಪ್ರಶ್ನೆಗಳನ್ನೆತ್ತುತ್ತಲೇ ದೇವರನ್ನು ಪ್ರಶ್ನಿಸುವ, ಅಸ್ಮಿತೆಯನ್ನು ತಡಕಾಡುವ ಕವಿತೆಗಳಿಗೆ ಐದನೆಯ ಗೋಷ್ಠಿ ಸಾಕ್ಷಿ ಆಯಿತು.

ಬಳ್ಳಾರಿಯಲ್ಲಿ ಶುಕ್ರವಾರ ಆರಂಭವಾದ ಸಂಗಂ ವಿಶ್ವಕವಿ ಸಮ್ಮೇಳನದ ಐದನೆಯ ಗೋಷ್ಠಿಯು ಕೇಳುಗರಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಕವಿತೆಗಳನ್ನು ಪ್ರಸ್ತುತಪಡಿಸಲಾಯಿತು.

ಚಿಲಿ ದೇಶದ ಜೇವಿಯರ್ ಯಾಹ್ಯಾಂಡರ್ ಅವರು ಅಸ್ತಿತ್ವವನ್ನೇ ಪ್ರಶ್ನಿಸುವ ಕವಿತೆಯ ಸಾಲುಗಳನ್ನು ಓದಿದರು. ನನ್ನ ಅಸ್ತಿತ್ವವನ್ನು ಅನುಮಾನಿಸು, ನಾನು ಅದನ್ನು ಅನುಮಾನಿಸಿದಾಗ ನನ್ನ ನಂಬದಿರು ಎಂಬ ಸಾಲುಗಳು ನಮ್ಮೊಳಗಿನ ಹುಡುಕಾಟಕ್ಕೆ ಧ್ವನಿಯಾದವು.

ಅದಕಂಜಿ ಪಟೇಲ್ ಅವರು ಭೂಮಿಗೀತವನ್ನು ಹೇಳುತ್ತ, ಸೆಟೆದು ನಿಂತಿರುವ ಮನುಷ್ಯನೆ ನನ್ನೆದೆಯ ಹಾಡನ್ನು ಒಮ್ಮೆ ಆಲಿಸು ಎನ್ನುತ್ತಲೇ ದೇವನಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದರು. ಭೂಮಿ ಆಕಾಶಗಳು ಮಾತ್ರವೇ ನಮಗೆ ಎಂದು ಕೇಳಿದ ಗಂಡು ಹೆಣ್ಣುಗಳಿಗೆ ಬಂಧ, ಬಾಂಧವ್ಯಗಳನ್ನು ಸೃಷ್ಟಿಸಿದ ಕುರಿತ ಕವಿಎಯನ್ನು ಓದುತ್ತ, ದೇವರಿಗೆ ಜಾತ್ರೆಗೆ ಬಾ ಎಂದು ಕರೆಯುವ ವ್ಯಂಗ್ಯಜ್ಜೆ ಧ್ವನಿಯಾದರು.

ರಾಯ ಸಾಬ್ ದರ್ಗದವರಮ ಗಾಂಧಿ ನೇಯ್ದಿಟ್ಟ ಬಟ್ಟೆ ಎಂಬ ಕವಿತೆಯನ್ನು ಓದಿದರು. ಗಾಂಧಿ ಹಣವಾದ ಬಗೆ, ಬಣ್ಣಗಳು ಬಣವಾದ ಬಗೆಯನ್ನು ವಿವರಿಸುತ್ತಲೇ ವಿಷಾದಿಸಿದರು.

'ಸಂಗಂ' ವಿಶ್ವ ಕವಿ ಸಮ್ಮೇಳನದಲ್ಲಿ 'ಮೋದಿ ಜಿಂದಾಬಾದ್' ಗಲಾಟೆ

ವ್ಯವಸ್ಥೆಗೆ ವ್ಯಂಗ್ಯದ ಮೊನಚು: ಮನೋಜ್ ಬೊಗಟಿ ಕವಿತೆ

ಮಲಯಾಳಂ ಗೀತರಚನೆಕಾರಅನ್ವರ್ ಅಲಿ ಅವರ'ರೇಪ್' ಕವಿತೆ ಸೃಷ್ಟಿಸಿದ ನೀರವ ಮೌನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.