ಹೊಸಪೇಟೆ (ವಿಜಯನಗರ): ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತಾಲ್ಲೂಕಿನ ಹಂಪಿಯಲ್ಲಿ ಗುರುವಾರ ಶ್ರಾದ್ಧ ಕಾರ್ಯ ಮಾಡಿದ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

‘ಹಂಪಿಯ ತುಂಗಭದ್ರಾ ನದಿ ಬಳಿಯ ಕರ್ಮ ಮಂಟಪದ ಸಮೀಪ ಪುರೋಹಿತ ಕೃಷ್ಣ ಪಾಟೀಲ, ರಾಯಚೂರಿನ ವಿಜಯಕುಮಾರ ಹಾಗೂ ಶ್ರೀನಿವಾಸ್ ಅವರು ತಂದೆಯ ಪಿಂಡ ಪ್ರದಾನ ಕಾರ್ಯ ಮಾಡಿದ್ದಾರೆ. ಸಾಂಕ್ರಾಮಿಕ ತಡೆ ಕಾಯ್ದೆ ಅನ್ವಯ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ’ ಎಂದು ಸಿಪಿಐ ಹಸನ್ ಸಾಬ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

92 ದ್ವಿಚಕ್ರ ವಾಹನ ವಶ:

ಲಾಕ್‌ಡೌನ್ ಎರಡನೇ ದಿನವಾದ ಗುರುವಾರ ಪೊಲೀಸರು ತಾಲ್ಲೂಕಿನಾದ್ಯಂತ 92 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು, ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪಟ್ಟಣ ಪೊಲೀಸ್ ಠಾಣೆ, ಟಿ.ಬಿ.ಡ್ಯಾಂ, ಚಿತ್ತವಾಡ್ಗಿ, ಗ್ರಾಮೀಣ ಠಾಣೆ ಹಾಗೂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 72 ವಾಹನ ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಮಲಾಪುರ ಠಾಣೆ ವ್ಯಾಪ್ತಿಯಲ್ಲಿ 20 ವಾಹನಗಳನ್ನು ವಶಪಡಿಸಿಕೊಂಡು ನಿಯಮ ಮೀರಿ ಓಡಾಡುತ್ತಿದ್ದ ಐವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ 125 ವಾಹನ ವಶಪಡಿಸಿಕೊಂಡು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.