ಬಳ್ಳಾರಿ: ‘ಉತ್ತರ ಭಾರತದ ಪಪ್ಪು (ರಾಹುಲ್ ಗಾಂಧಿ) ಮತ್ತು ದಕ್ಷಿಣ ಭಾರತದ ಪಪ್ಪು (ಸ್ಟಾಲಿನ್ ಪುತ್ರ, ತಮಿಳುನಾಡು ಸಚಿವ ಉದಯ ನಿಧಿ) ಎಲ್ಲ ಪಪ್ಪುಗಳು ಸೇರಿದರೂ ದೇಶ ಉದ್ಧಾರ ಮಾಡಲು ಆಗುವುದಿಲ್ಲ’ ಎಂದು ಬಿಜೆಪಿ ಹಿರಿಯ ನಾಯಕ ಬಿ. ಶ್ರೀರಾಮುಲು ಲೇವಡಿ ಮಾಡಿದರು.
‘ಹಿಂದೆ ಮೋದಿ ಹೆಸರು ಇಟ್ಟುಕೊಂಡವರೆಲ್ಲ ವಂಚಕರು ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಈಗ ನಾನು ಈ ಪಪ್ಪುಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದು, ಸೂರ್ಯ–ಚಂದ್ರರು ಇರುವುದು ಎಷ್ಟು ಸತ್ಯವೋ 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಪುನಃ ಪ್ರಧಾನಿಯಾಗುವುದೂ ಅಷ್ಟೇ ಸತ್ಯ’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿಯಲ್ಲಿ ಎಷ್ಟೊಂದು ಪಪ್ಪುಗಳು
‘ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಬಿ. ಶ್ರೀರಾಮುಲು ಕರೆದಿರುವುದು ಹಾಸ್ಯಾಸ್ಪದ. ಅವರ ಪಕ್ಷದಲ್ಲಿ ಎಷ್ಟೊಂದು ಪಪ್ಪುಗಳಿದ್ದಾರೆ ಎಂಬುದನ್ನು ಮೊದಲು ನೋಡಿಕೊಳ್ಳಲಿ’ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ತಿರುಗೇಟು ನೀಡಿದರು.
‘ರಾಹುಲ್ ಗಾಂಧಿ ಅವರ ಒಂದು ಹೆಜ್ಜೆಯಿಂದ ರಾಜ್ಯದಲ್ಲಿ ಬಿಜೆಪಿ ಹೇಗೆ ಸುನಾಮಿಯಂತೆ ಕುಸಿದಿದೆ. 2024ರ ಲೋಕಸಭೆ ಚುನಾವಣೆಯಲ್ಲೂ ನಿಮಗೆ ಇದೇ ದುರ್ಗತಿ ಬರಲಿದೆ. ದೇಶದ ವಿವಿಧ ಭಾಗಗಳನ್ನು ಬೆಸೆಯುವ ಉದ್ದೇಶದಿಂದ ಕೈಗೊಂಡಿದ್ದ ಪಾದಯಾತ್ರೆ ಎಲ್ಲ ವರ್ಗದವರ ಮನಗೆದ್ದಿದೆ. ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದ ಫಲಿತಾಂಶ ಪುನರಾವರ್ತನೆ ಆಗಲಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.