ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಪನಹಳ್ಳಿ: ಸಿದ್ದರಾಮೇಶ್ವರ ಅಜ್ಜ ನಿಧನ

Published 12 ಆಗಸ್ಟ್ 2024, 15:16 IST
Last Updated 12 ಆಗಸ್ಟ್ 2024, 15:16 IST
ಅಕ್ಷರ ಗಾತ್ರ

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಬಸವತತ್ವ ಪ್ರಚಾರಕ್ಕೆ ಲೋಕ ಸಂಚಾರ ಕೈಗೊಂಡು ಬಸವ ಕಲ್ಯಾಣದಲ್ಲಿ ನೆಲೆಸಿ, ಸ್ವಗ್ರಾಮ ತಾಲ್ಲೂಕಿನ ಮತ್ತಿಹಳ್ಳಿಗೆ ಮರಳಿದ್ದ ಶತಾಯುಷಿ ಶಿವರಾಮಪ್ಪ(104) ಸೋಮವಾರ ನಿಧನರಾದರು. ಅವರಿಗೆ ಮೂವರು ಪುತ್ರರು ಇದ್ದಾರೆ.

50 ವರ್ಷಗಳ ಹಿಂದೆ ಶಿವರಾಮಪ್ಪ ಅವರು ಬಸವ ತತ್ವ ಪ್ರಚಾರಕ್ಕಾಗಿ ಊರು ತೊರೆದು, ಬಸವಕಲ್ಯಾಣದಲ್ಲಿ ನೆಲೆಸಿ ‘ಸಿದ್ದರಾಮೇಶ್ವರ ಅಜ್ಜ’ ಎಂದು ಪ್ರಸಿದ್ಧಿ ಪಡೆದಿದ್ದರು. ಬಸವಕಲ್ಯಾಣದ ಅನುಭವ ಮಂಟಪದ ಸಂಚಾಲಕರಾಗಿದ್ದರು.

‘ಅಂತ್ಯಕ್ರಿಯೆ ಅವರ ಸ್ವಗ್ರಾಮ ಮತ್ತಿಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನೆರವೇರಿಸಲಾಗುವುದು’ ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT