ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಥೆಗಾರ ರಾಜಶೇಖರ ನೀರಮಾನ್ವಿ ನಿಧನ

Published : 8 ಆಗಸ್ಟ್ 2024, 18:25 IST
Last Updated : 8 ಆಗಸ್ಟ್ 2024, 18:25 IST
ಫಾಲೋ ಮಾಡಿ
Comments

ಬಳ್ಳಾರಿ: ಕನ್ನಡದ ಕಥೆಗಾರ ರಾಜಶೇಖರ ನೀರಮಾನ್ವಿ (83) ಗುರುವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ನಗರದ ವೀರನಗೌಡ ಕಾಲೊನಿಯ ಅವರ ಮನೆಯಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. 

ರಾಯಚೂರು ಜಿಲ್ಲೆಯ ನೀರಮಾನ್ವಿ ಗ್ರಾಮದ ರಾಜಶೇಖರ ಅವರು ಬಳ್ಳಾರಿಯ ವೀರಶೈವ ಪದವಿ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರದ ಪ್ರಾಧ್ಯಾಪಕರಾಗಿ, ನಿವೃತ್ತರಾಗಿದ್ದರು. ಗೋಕಾಕ್ ಚಳವಳಿ, ಜೆಪಿ ಚಳವಳಿ ಮತ್ತು ವಾಟಾಳ್ ಚಳವಳಿಗಳಲ್ಲಿ ಭಾಗವಹಿಸಿದ್ದರು.

1978ರಲ್ಲಿ ಪ್ರಕಟವಾದ ನೀರಮಾನ್ವಿ ಅವರ ‘ಹಂಗಿನ ಅರಮನೆಯ ಹೊರಗೆ’ ಮೊದಲ ಕಥಾ ಸಂಕಲನಕ್ಕೆ ಅದೇ ವರ್ಷ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿತ್ತು. 1990ರಲ್ಲಿ ಅವರ ‘ಕರ್ಪೂರದ ಕಾಯದಲ್ಲಿ’ ಎರಡನೇ ಕಥಾ ಸಂಕಲನವನ್ನು ಬಳ್ಳಾರಿಯ ಲೋಹಿಯಾ ಪ್ರಕಾಶನ ಪ್ರಕಟಿಸಿತು. ಪ್ರಕಾಶನ ಅಸ್ತಿತ್ವಕ್ಕೆ ಬರಲೂ ಕಾರಣವಾಯಿತು. ನೀರಮಾನ್ವಿ ಅವರಿಗೆ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೆಟಗೇರಿ ಕೃಷ್ಣ ಶರ್ಮ ಪ್ರಶಸ್ತಿ ಸಂದಿವೆ.

‘ನೀರಮಾನ್ವಿ ಅವರು ಬರೆದಿದ್ದು ಕಡಿಮೆ. ಎರಡು ಕಥಾ ಸಂಕಲನ ಮತ್ತು 12 ಕತೆಗಳನ್ನು ಮಾತ್ರ ಬರೆದರು. ಅವರ ಕಥೆಗಳು ದೇಶದ 8 ಭಾಷೆಗಳಿಗೆ ಅನುವಾದಗೊಂಡಿವೆ’ ಎಂದು ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ. ಚನ್ನಬಸಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT