ಹೊಸಪೇಟೆ (ವಿಜಯನಗರ): ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ವಿಜಯನಗರ ಕಬಡ್ಡಿ ಲೀಗ್ ಅಂತಿಮ ಪಂದ್ಯದಲ್ಲಿ ಸುರಪುರ ಹಾಗೂ ಹರಪನಹಳ್ಳಿ ತಂಡಗಳು ಕ್ರಮವಾಗಿ ಮಹಿಳೆಯರು, ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿವೆ.

ಮಹಿಳೆಯರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಯಾದಗಿರಿ ತಂಡವನ್ನು ಸೋಲಿಸಿ ಸುರಪುರ ಪ್ರಶಸ್ತಿ ಜಯಿಸಿತು. ಹಗರಿಬೊಮ್ಮನಹಳ್ಳಿ ದಬಾಂಗ್ ಮೂರನೇ ಸ್ಥಾನ ಪಡೆಯಿತು.

ಇನ್ನು, ಪುರುಷರ ವಿಭಾಗದಲ್ಲಿ ಹರಪನಹಳ್ಳಿ ತಂಡವು ಜೆ.ಎನ್.ಬಿ. ಹೊಸಪೇಟೆ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಬಳ್ಳಾರಿ ಯೋಧ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ವಿಜೇತರಿಗೆ ₹1.8 ಲಕ್ಷ, ರನ್ನರ್ ಅಪ್ ತಂಡಕ್ಕೆ ₹81 ಸಾವಿರ ಹಾಗೂ ಮೂರನೇ ಸ್ಥಾನ ಪಡೆದ ತಂಡಕ್ಕೆ ₹54 ಸಾವಿರ ನಗದು, ಟ್ರೋಫಿ ನೀಡಿ ಗೌರವಿಸಲಾಯಿತು. ಮೂರು ದಿನಗಳ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು 80 ತಂಡಗಳು ಪಾಲ್ಗೊಂಡಿದ್ದವು.

ಸಿದ್ದಾರ್ಥ ಸಿಂಗ್, ಎಸ್. ರವಿ, ದುರುಗೋಜಿ ರಾವ್, ಜಿ. ಶಿವಕುಮಾರ, ಸಂದೀಪ್ ಸಿಂಗ್, ವೆಂಕಟೇಶ್, ಮಧುರಚೆನ್ನಶಾಸ್ತ್ರಿ, ಎಂ.ಕೆ. ಸಿರಗುಪ್ಪೆ, ಶಿವಣ್ಣ, ಕಿಚಡಿ ವಸಂತ, ತಾರಿಹಳ್ಳಿ ಜಂಬುನಾಥ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.