ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ: ವಾರ್ಡ್ ಸಮೀಕ್ಷೆ ನಡೆಸಿದ ತಹಶೀಲ್ದಾರ್

Published 2 ಜುಲೈ 2024, 16:23 IST
Last Updated 2 ಜುಲೈ 2024, 16:23 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್ ಎಫ್ ಸಿ ಅನುದಾನ ₹ 3 ಕೋಟಿ ಹಂಚಿಕೆ ಕುರಿತ ಕ್ರಿಯಾ ಯೋಜನೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಚ್.ವಿಶ್ವನಾಥ ಸೋಮವಾರ ಮತ್ತು ಮಂಗಳವಾರ ಪ್ರತಿಯೊಂದು ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ‘ಎಲ್ಲ 20 ವಾರ್ಡ್ ಪರಿಶೀಲಿಸಲಾಗಿ ಕೆಲವು ಅನಗತ್ಯ ಕಾಮಗಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಮುಖ್ಯವಾಗಿ 14, 17 ಮತ್ತು 18ನೇ ವಾರ್ಡ್ ನ ಕಾಮಗಾರಿ ಬದಲಾಯಿಸಿದ್ದು, ಈ ಕಾಮಗಾರಿಗಳ ಮೊತ್ತವನ್ನು ನೀಲಕಂಠೇಶ್ವರ ದೇವಸ್ಥಾನದ ಬಳಿಯ ಹಳ್ಳದ ಕಾಮಗಾರಿಗೆ ಹೊಂದಿಸಲಾಗಿದೆ' ಎಂದು ತಿಳಿಸಿದರು.

ವಾರ್ಡ್ ಗಳಿಗೆ ಎಸ್ ಎಫ್ ಸಿ ಅನುದಾನದ ₹ 3 ಕೋಟಿ ಹಂಚಿಕೆ ನ್ಯಾಯಸಮ್ಮತವಾಗಿ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಅನುಮೋದನೆಗೆ ಸಲ್ಲಿಸಲಾಗಿದೆ ಎಂದರು.

ಮುಖ್ಯಾಧಿಕಾರಿ ಪರಶುರಾಮ, ಕಿರಿಯ ಎಂಜಿನಿಯರ್ ಸುನಂದ, ಕಂದಾಯ ಅಧಿಕಾರಿ ಸುರೇಶ್ ಬಾಬು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT