ಸಿರುಗುಪ್ಪ: ‘ನಗರದಲ್ಲಿ ನಿತ್ಯ ಸಂಗ್ರಹಿಸಿದ ಒಣ ಕಸ ಮತ್ತು ಹಸಿ ಕಸದಿಂದ ತಯಾರಿಸಿದ ಕಾಂಪೋಸ್ಟ್ ಸಾವಯವ ಗೊಬ್ಬರವು ಮನೆಯ ಕೈದೋಟಗಳಿಗೆ ಬಳಸಿಕೊಳ್ಳಲು ಯೋಗ್ಯವಾಗಿದೆ. ಇದರಿಂದ ಸಸ್ಯಗಳ ಫಲವತ್ತತೆ ಹೆಚ್ಚಿಸುತ್ತದೆ’ ಎಂದು ಪೌರಾಯುಕ್ತ ಗಂಗಾಧರ ಹೇಳಿದರು.

ನಗರದ ತಾಲ್ಲೂಕು ಮೈದಾನದಲ್ಲಿ ನಗರಸಭೆ ಕಾರ್ಯಾಲಯದಿಂದ ಕರ್ನಾಟಕ ರಾಜೋತ್ಸವ ಅಂಗವಾಗಿ ಏರ್ಪಡಿಸಿದ್ದ ‘ಸಾವಯವ ಗೊಬ್ಬರ ಬಳಸಿ, ನಗರವನ್ನು ಸ್ವಚ್ಚಗೊಳಿಸಿ, ಮಣ್ಣಿನ ಫಲವತ್ತತೆ ಉಳಿಸಿ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಲಂಕಾರಿಕ ಸಸ್ಯಗಳು ಮತ್ತು ಹುಲ್ಲುಗಾವಲು ಪ್ರದೇಶಗಳಿಗೆ ಸಾಕಷ್ಟು ಸಾವಯವ ಪದಾರ್ಥಗಳನ್ನು ಸೇರಿಸುವುದು ಇನ್ನೂ ಹೆಚ್ಚು ನಿರ್ಣಾಯಕವಾಗಿದೆ’ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ರೆಡ್ಡಿ, ಸಿಡಿಪಿಒ ಪ್ರದೀಪ್ಕುಮಾರ, ನಗರಸಭೆ ಆರೋಗ್ಯ ಅಧಿಕಾರಿಗಳಾದ ರಂಗಸ್ವಾಮಿ, ಪುಷ್ಪಲತಾ, ಹೇಮಂತರಾಜ, ಕಂದಾಯ ಅಧಿಕಾರಿಗಳಾದ ರಾಜಭಕ್ಷಿ, ವೆಂಕೋಬ, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.