ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದಿಂದ ವಾಸವಿ ದೇವಿ ಜಯಂತಿ

Last Updated 14 ಮೇ 2019, 14:05 IST
ಅಕ್ಷರ ಗಾತ್ರ

ಹೊಸಪೇಟೆ: ಆರ್ಯ ವೈಶ್ಯ ಸಂಘದಿಂದ ಮಂಗಳವಾರ ನಗರದಲ್ಲಿ ವಾಸವಿ ದೇವಿ ಜಯಂತಿಯನ್ನು ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ವಾಸವಿ ದೇವಿಗೆ ಬೆಳಿಗ್ಗೆ ವಿಶೇಷ ಅಭಿಷೇಕ, ಅಲಂಕಾರ ಮಾಡಿ ನೈವೇದ್ಯ ಸಮರ್ಪಿಸಲಾಯಿತು. ನಂತರ ನಗರೇಶ್ವರ ದೇವಸ್ಥಾನದಿಂದ ವಾಸವಿ ದೇವಸ್ಥಾನದ ವರೆಗೆ ಪೂರ್ಣಕುಂಭ ಕಲಶ ಮೆರವಣಿಗೆ ನಡೆಯಿತು. ಸಮಾಜದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

ಬಳಿಕ ದೇವಸ್ಥಾನದಲ್ಲಿ ವಾಸವಿ ದೇವಿ ತೊಟ್ಟಿಲು, ಮಡಿಲಕ್ಕಿ ಸಮರ್ಪಣೆ, ತುಲಾಭಾರ, ಹೋಮ–ಹವನ, ಮಹಾಮಂಗಳಾರತಿ, ಪ್ರಸಾದ ನಡೆಯಿತು. ಇದೇ ವೇಳೆ ಹಮ್ಮಿಕೊಂಡಿದ್ದ ಶಿಬಿರದಲ್ಲಿ 20ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.

ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆರ್ಯವೈಶ್ಯ ಸಂಘದ ಗೌರವ ಅಧ್ಯಕ್ಷ ಭೂಪಾಳ್‌ ರಾಘವೇಂದ್ರ ಶೆಟ್ಟಿ, ‘ಸಮುದಾಯದಲ್ಲಿ ಅನೇಕ ಜನ ಪ್ರತಿಭಾವಂತರಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗುತ್ತಿಲ್ಲ. ಅಂತಹವರಿಗೆ ಆರ್ಥಿಕ ನೆರವು ನೀಡಬೇಕಿದೆ’ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಆರ್ಯವೈಶ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮಶೇಖರ,ವಾಸವಿ ಯುವಜನ ಸಂಘದ ಅಧ್ಯಕ್ಷ ಜೆ.ವೆಂಕಣ್ಣ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ ಬಾಬು, ಆರ್ಯವೈಶ್ಯ ಮಹಾಮಂಡಳದ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಆರ್ಯವೈಶ್ಯ ಸಂಘದ ಅಧ್ಯಕ್ಷ ಸಂಜೀವಪ್ಪ ಶೆಟ್ಟಿ, ಕಾರ್ಯದರ್ಶಿ ಕುಮಾರಸ್ವಾಮಿ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ರಾಧಾ, ಭೂಪಾಳ್‌ ಮಂಜುಳಾ, ಘಂಟೆ ವಿಜಯಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT