ಹೊಸಪೇಟೆ (ವಿಜಯನಗರ): ಕೋವಿಡ್–19ನಿಂದ ಸಾವು ನೋವು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದು, ಅದರಲ್ಲೂ ಯುವಕರು ಕೇಂದ್ರಗಳಿಗೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ನಗರದ ಉದ್ಯೋಗ ಪೆಟ್ರೋಲ್ ಬಂಕ್ ಬಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಷ್ಟೇ 18 ವರ್ಷ ಮೇಲಿನವರಿಗೆ ಲಸಿಕೆ ಹಾಕಲಾಗುತ್ತಿದ್ದು, ಗುರುವಾರ ಕೇಂದ್ರದ ಎದುರು ಉದ್ದನೆಯ ಸಾಲು ಕಂಡು ಬಂತು.

ಮಂಗಳವಾರದಿಂದ 18 ವರ್ಷ ಮೇಲಿನವರಿಗೂ ಲಸಿಕೆ ಹಾಕಲಾಗುತ್ತಿದೆ. ಬುಧವಾರ ಸುರಿವ ಮಳೆಯಲ್ಲೇ ಸಾಲಲ್ಲಿ ನಿಂತುಕೊಂಡು ಯುವಕ/ಯುವತಿಯರು ಲಸಿಕೆ ಹಾಕಿಸಿಕೊಂಡಿದ್ದರು.

ಲಸಿಕೆ ಮುಗಿದಿರುವುದರಿಂದ ಗುರುವಾರ ಮಧ್ಯಾಹ್ನದ ವರೆಗೆ ಲಸಿಕೆ ಹಾಕಲಾಯಿತು. ಇನ್ನುಳಿದ ಏಳು ಕೇಂದ್ರಗಳಲ್ಲಿ ಲಸಿಕೆ ಮುಗಿದಿರುವುದರಿಂದ 45 ವರ್ಷ ಮೇಲಿನವರಿಗೆ ಗುರುವಾರ ಲಸಿಕೆ ಹಾಕಲಿಲ್ಲ. ಇನ್ನೂ ನಾಲ್ಕೈದು ದಿನಗಳ ನಂತರವೇ ಲಸಿಕೆ ಬರಲಿದ್ದು, ಅಲ್ಲಿಯವರೆಗೆ ಕಾದು ಕೂರುವುದು ಸಾರ್ವಜನಿಕರಿಗೆ ಅನಿವಾರ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.