ಕೂಡ್ಲಿಗಿ: ಸ್ನೇಹಚೈಲ್ಡ್ ಲೈನ್ ಸಹಾಯವಾಣಿ ಸಂಸ್ಥೆಯ ಕಾರ್ಯಾಚರಣೆಯಿಂದಾಗಿ ಪಟ್ಟಣದ ಹೊರವಲಯದಲ್ಲಿ ಟೆಂಟ್ನಲ್ಲಿ ವಾಸವಾಗಿದ್ದ ಅಲೆಮಾರಿ ಜನಾಂಗದ 3 ಮಕ್ಕಳು ಗುರುವಾರ ಶಾಲೆಗೆ ಸೇರಿವೆ.

ಪಟ್ಟಣದ ಹೊರವಲಯದಲ್ಲಿ ಬಳ್ಳಾರಿ ರಸ್ತೆಯ್ಲ್ಲಲಿ ರಸ್ತೆಯ ಪಕ್ಕ ಕಳೆದ 15-20 ದಿನಗಳಿಂದ ಅಲೆಮಾರಿ ಜನಾಂಗದವರು ಟೆಂಟ್ ಹಾಕಿಕೊಂಡು ವಾಸವಾಗಿದ್ದು, 2 ಕುಟುಂಬಗಳು ನೆಲೆಯೂರಿವೆ. ಎತ್ತುಗಳಿಗೆ ನಾಲು ಬಡಿಯುವ ವೃತ್ತಿಯ ಈ ಜನಾಂಗ ದಾವಣಗೆರೆಯಿಂದ ಬಂದಿದೆ.

ಕೂಡ್ಲಿಗಿಯಲ್ಲಿ ಇನ್ನೂ 4 ವರ್ಷ ಇರುವುದಾಗಿ ಜನಾಂಗದ ರಾಜಾಸಾಬ್ ತಿಳಿಸಿದರು. ಮಕ್ಕಳನ್ನು ದಾವಣಗೆರೆಯಲ್ಲಿ ಶಾಲೆಗೆ ಕಳಿಸಲಾಗುತ್ತಿತ್ತು, ತಾವು ಅಲೆಮಾರಿಗಳಾಗಿದ್ದುರಿಂದಲೂ ಹಾಗೂ ಆರ್ಥಿಕ ತೊಂದರೆ ಇರುವುದರಿಂದಲೂ ಮಕ್ಕಳನ್ನು ಶಾಲೆಗೆ ಕಳಿಸಲಾಗುತ್ತಿಲ್ಲ ಎಂದು ಪಾಲಕರು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಸ್ನೇಹ ಚೈಲ್ಡ್ಲೈನ್ ಸಂಸ್ಥೆಯ ಸದಸ್ಯರು ಪಾಲಕರ ಮನವೊಲಿಸಿ, ತಿಳಿವಳಿಕೆ ಹೇಳಿ ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾದರು.

ಅಲ್ಲದೆ ಸರ್ಕಾರದ ಸೌಲಭ್ಯಗಳು, ಶಿಕ್ಷಣದಿಂದ ದೊರೆಯುವ ಅರಿವು, ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಮಕ್ಕಳಾದ ಆಶಾಬಾನು (8), ಹುಸೇನ್ಸಾಬ್ (7), ರಿಜ್ವಾನ್ (6)ರನ್ನು ಪಟ್ಟಣದ ಶುಭೋದಯ ಬಾಲಕಾರ್ಮಿಕ ಶಾಲೆಗೆ ದಾಖಲಾತಿ ಮಾಡಲಾಯಿತು.

ಈ ಸಂದರ್ಭದ್ಲ್ಲಲಿ ಸ್ನೇಹ ಚೈಲ್ಡ್ಲೈನ್ ಸಂಸ್ಥೆಯ ಎರಿಸ್ವಾಮಿ, ಸಹಾಯಕ ಮ್ಲ್ಲಲಿಕಾರ್ಜುನ, ವೆಂಕಟೇಶ್, ಸಮುದಾಯ ಸಂಘಟಕ ಶ್ರಿನಿವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.