ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ|14ರಂದು ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಜೆಡಿಎಸ್‌ ಒಳ ಒಪ್ಪಂದ

Last Updated 9 ಮಾರ್ಚ್ 2023, 4:09 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಇಲ್ಲಿನ ಪುರಸಭೆ ಅಧ್ಯಕ್ಷರಾಗಿದ್ದ ರಾಜೇಶ್ವರಿ ಭಾಸ್ಕರ್ ಅವರ ರಾಜೀನಾಮೆಯಿಂದ ತೆರವುಗೊಂಡಿರುವ ಅಧ್ಯಕ್ಷ ಸ್ಥಾನಕ್ಕೆ ಮಾರ್ಚ್ 14ರಂದು ಮಧ್ಯಾಹ್ನ 1ಗಂಟೆಗೆ ಚುನಾವಣೆ ನಿಗದಿಪಡಿಸಿರುವ ತಹಶೀಲ್ದಾರ್ ಶಿವರಾಜ್ ಆದೇಶ ಹೊರಡಿಸಿದ್ದಾರೆ.

ಪುರಸಭೆಯಲ್ಲಿ 23 ಸದಸ್ಯರಿದ್ದು, 13 ಜೆಡಿಎಸ್ ಸದಸ್ಯರು, 7 ಕಾಂಗ್ರೆಸ್ ಸದಸ್ಯರು, ಒಬ್ಬರು ಬಿಜೆಪಿ ಹಾಗೂ ಇಬ್ಬರು ಪಕ್ಷೇತರರು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಸದಸ್ಯರೊಂದಿಗೆ ಸಂಸದ ಬಿ.ಎನ್. ಬಚ್ಚೇಗೌಡ ಹಾಗೂ ಶಾಸಕ ನಿಸರ್ಗ ನಾರಾಯಣಸ್ವಾಮಿ ಕೂಡ ಮತ ಚಲಾಯಿಸುವ ಸಂಭವವಿದೆ.

ಒಳ ಒಪ್ಪಂದ: ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನದ ಮೊದಲ ಅವಧಿಯನ್ನು ರಾಜೇಶ್ವರಿ ಭಾಸ್ಕರ್ ಅವರಿಗೆ ಹಾಗೂ ಎರಡನೇ ಅವಧಿಯನ್ನು ವಿಮಲಾ ಬಸವರಾಜ್ ಅವರಿಗೆ ನೀಡುವುದಾಗಿ ಜೆಡಿಎಸ್ ಮುಖಂಡರು ಒಳ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದಂತೆ ರಾಜೇಶ್ವರಿ ಭಾಸ್ಕರ್ ರಾಜೀನಾಮೆ ನೀಡಿದ್ದಾರೆ. ಎರಡನೇ ಅವಧಿಗೆ ವಿಮಲಾ ಅವರನ್ನು ಆಯ್ಕೆ ಮಾಡುವ ಸಂಭವವಿದೆ.

ಏಳು ಕಾಂಗ್ರೆಸ್ ಸದಸ್ಯರು, ಇಬ್ಬರು ಪಕ್ಷೇತರರು, ಬಿಜೆಪಿ ಸದಸ್ಯೆ ಸೇರಿ ಒಟ್ಟು 10 ಮಂದಿ ಹಾಗೂ ಸಂಸದ ಬಿ.ಎನ್. ಬಚ್ಚೇಗೌಡ ಅವರ ಬೆಂಬಲ ಪಡೆದುಕೊಂಡರೆ 11 ಸದಸ್ಯರ ಸಂಖ್ಯಾಬಲವಾಗುತ್ತದೆ. ಜೆಡಿಎಸ್ ಸಂಖ್ಯಾಬಲ 14 ಆಗುತ್ತದೆ.

ಆದರೆ, ಜೆಡಿಎಸ್‌‌ನಿಂದ ಕೆಲ ಸದಸ್ಯರು ನಮಗೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ಸದಸ್ಯರು, ಚುನಾವಣೆ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಈ ನಡುವೆ ಜೆಡಿಎಸ್ ಮುಖಂಡರು ಯಾವ ರೀತಿಯ ತಂತ್ರಗಾರಿಕೆ ಹೆಣೆದಿದ್ದಾರೆ ಎಂಬುದನ್ನು ಕಾದು
ನೋಡಬೇಕಿದೆ.

ಮಾರ್ಚ್ 14ರಂದು ಬೆಳಿಗ್ಗೆ 10ಗಂಟೆಯಿಂದ 12 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿಪಡಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಚುನಾವಣೆ ಅನಿವಾರ್ಯವಾದರೆ 1 ಗಂಟೆಗೆ ಸದಸ್ಯರು ‘ಕೈ’ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT