ದೇವನಹಳ್ಳಿ:ದ್ವಿಚಕ್ರವಾಹನವೊಂದರಲ್ಲಿ ದೇವನಹಳ್ಳಿ ರಾಣಿ ಸರ್ಕಲ್‌ನಿಂದ ಆವತಿಯವರೆಗೂ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರವಾಹನ ಸವಾರನ ವರ್ತನೆಯಿಂದ ಬೇಸತ್ತಿದ್ದ ಕಾರು ಚಾಲಕರೊಬ್ಬರು, ಸವಾರನನ್ನು ಅಡ್ಡಗಟ್ಟಿ ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಹೋಬಳಿಯ ಆವತಿಯ ಕೆನರಾ ಬ್ಯಾಂಕಿನ ಸಮೀಪದಲ್ಲಿ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿದ್ದು ಸಂಪೂರ್ಣವಾಗಿ ಸುಟ್ಟುಹೋಗಿದೆ.

ಆಂಧ್ರಪ್ರದೇಶದ ಕಡಪ ಮೂಲದ ರತ್ನಮಯ್ಯ ಅವರಿಗೆ ಸೇರಿದ ಬೈಕ್ ಇದಾಗಿದೆ ಎಂದು ಗುರ್ತಿಸಲಾಗಿದೆ.ಬೈಕ್ ಸವಾರ ಹಾಗೂ ಕಾರು ಚಾಲಕ ಪರಾರಿಯಾಗಿದ್ದಾರೆ.

‘ಈ ಪ್ರಕರಣ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ’ ಎಂದು ವಿಜಯಪುರ ಠಾಣೆಯ ಪಿಎಸ್‌ಐ ನಂದೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.