ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ಆಂಬುಲೆನ್ಸ್‌‌ ಉದ್ಘಾಟನೆ

Last Updated 18 ಸೆಪ್ಟೆಂಬರ್ 2020, 14:09 IST
ಅಕ್ಷರ ಗಾತ್ರ

ಹೊಸಕೋಟೆ: ನವಜಾತ ಹಾಗೂ ಅವಧಿಗೆ ಮೊದಲೇ ಹುಟ್ಟಿದ ಮಕ್ಕಳ ರಕ್ಷಣೆಗಾಗಿಯೇ ವಿಶೇಷವಾಗಿ ತಾಲ್ಲೂಕಿನಲ್ಲಿ ಎಲ್ಲಿಯೂ ಆಂಬುಲೆನ್ಸ್ ಗಳು ಇಲ್ಲದ ಕಾರಣ ಕೆಲವು ಬಾರಿ ಅಂತಹ ಸಂದರ್ಭದಲ್ಲಿ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ರೈನ್ ಬೋ ಆಸ್ಪತ್ರೆಯ ವೈದ್ಯರಾದ ರಜತ್ ಅತ್ರೇಯ ಹೇಳಿದರು.

ನಗರದಲ್ಲಿ ಕೃಷ್ಣ ಮಕ್ಕಳ ಆಸ್ಪತ್ರೆಯ ಜೊತೆ ಸೇರಿ ತಾಲ್ಲೂಕಿನಲ್ಲಿ ನವಜಾತ ಮಕ್ಕಳಿಗೆ ಬೇಕಾದ ವಿಶೇಷ ಚಿಕಿತ್ಸೆಗಾಗಿ ಆಂಬುಲೆನ್ಸ್‌ನ್ನುಉದ್ಘಾಟಿಸಿಅವರು ಮಾತನಾಡಿದರು.

ಕೃಷ್ಣ ಮಕ್ಕಳ ಆಸ್ಪತ್ರೆಯ ಡಾ. ಹರ್ವಿನ್‌ ಕುಮಾರ್ ಮಾತನಾಡಿ‌, ‘ಮಕ್ಕಳು ಹುಟ್ಟಿದ ಮೊದಲ ಮೂರು ನಿಮಿಷಗಳು ಬಹಳ ಮಹತ್ವದ್ದಾಗಿರುತ್ತದೆ. ಆ ಸಂದರ್ಭ ಮಕ್ಕಳಿಗೆ ಉತ್ತಮ ಆರೈಕೆ ಮುಖ್ಯ. ಅಂತಹ ಸಂದರ್ಭದಲ್ಲಿ ನವಜಾತ ಶಿಶುಗಳಿಗೆ ತೊಂದರೆಯಾದರೆ ಅವರಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆಯಿರುತ್ತದೆ. ತಾಲ್ಲೂಕಿನಲ್ಲಿ ಆಂಬ್ಯುಲೆನ್ಸ್‌ ಗಳ ಕೊರತೆಯಿದ್ದು ಅದಕ್ಕಾಗಿ ತಾವೂ ಮತ್ತು ರೈನ್ ಬೋ ಆಸ್ಪತ್ರೆಯವರು ಸೇರಿ ಅಂತಹ ತೊಂದರೆಗೆ ಒಳಗಾಗುವ ಮಕ್ಕಳಿಗೆ ತಕ್ಷಣ ತುರ್ತು ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗಳಿಗೆ ಸೇರಿಸಲು ಮಕ್ಕಳಿಗಾಗಿಯೇ ಕೆಲವು ಆಂಬುಲೆನ್ಸ್ ಗಳನ್ನು ಕಾಯ್ದಿರಿಸುವ ಸಲುವಾಗಿ ಈ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.

ಹೊಸಕೋಟೆ ಹಾಗೂ ಕೋಲಾರ ಜಿಲ್ಲೆಯ ಜನರೂ ಸಹಾ ಇದರ ಸದುಪಯೋಗ ಮಾಡಿಕೊಳ್ಳುವಂತೆ ಅವರು ಕೋರಿದರು. ಡಾ.ನಾಗರಾಜ್, ಡಾ.ಗಿರಿಜಾ, ನೀರ್‌ಬಿಲಾಲ್, ಡಾ. ಕವಿತಾ ಕುಮಾರಿ, ಡಾ.ಸಂಜಯ್, ಡಾ.ಸುಧಾ ಬೆನಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT