‘ಕೋಲಾರ ಕ್ಷೇತ್ರದಿಂದ ಆನಂದ್‌ ಅಂಬೇಡ್ಕರ್ ಕಣಕ್ಕೆ ಇಳಿಸಲು ಚಿಂತನೆ’

7

‘ಕೋಲಾರ ಕ್ಷೇತ್ರದಿಂದ ಆನಂದ್‌ ಅಂಬೇಡ್ಕರ್ ಕಣಕ್ಕೆ ಇಳಿಸಲು ಚಿಂತನೆ’

Published:
Updated:
Deccan Herald

ವಿಜಯಪುರ: 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ರಿಪಬ್ಲಿಕನ್ ಸೇನೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಜಿಗಣಿ ಶಂಕರ್ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷ ಕಳೆಯುತ್ತಿದ್ದರೂ ಮತದಾನದ ಕುರಿತು ಜನರಲ್ಲಿ ಜಾಗೃತಿ ಇಲ್ಲದಂತಾಗಿದೆ. ದೇಶದ ಜನರು ಮೂಲ ಸೌಕರ್ಯಗಳಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜಕೀಯ ಅಸ್ಥಿರತೆ ತಾಂಡವಾಡುತ್ತಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಿಂದ ಹೊರಗಿಡಲು ತೃತೀಯ ರಂಗ ರಚನೆಯಾಗುತ್ತಿದೆ. ಅದರಲ್ಲಿ  ಸೇರಿದ ರಾಜಕೀಯ ಪಕ್ಷಗಳಲ್ಲಿ ಹೊಂದಾಣಿಕೆ ಕಾಣಿಸುತ್ತಿಲ್ಲ. ಇದರಿಂದ ಅವರಿಗೆ ಹಿನ್ನಡೆಯಾಗುವ ಸಂಭವವಿದ್ದು, ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುವಂತೆ ಜನರ ಮುಂದೆ ಹೋಗುವುದಾಗಿ ತಿಳಿಸಿದರು.

ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿ ಇದೆ. ದೇಶದ ಯಾವ ಭಾಗದಲ್ಲೂ ಇಲ್ಲದಷ್ಟು ಅಂಬೇಡ್ಕರ್ ಪ್ರತಿಮೆಗಳು ಕೋಲಾರ ಕ್ಷೇತ್ರದಲ್ಲಿವೆ. ಅವರ ಸಿದ್ಧಾಂತ ಒಪ್ಪಿಕೊಳ್ಳುವಂತಹ ಜನರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಂಬೇಡ್ಕರ್ ಮೊಮ್ಮಗ ಆನಂದ್ ಅಂಬೇಡ್ಕರ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್, ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ, ಮುಖಂಡರಾದ ನಾರಾಯಣಸ್ವಾಮಿ, ಬಾಬು, ಮುನಯ್ಯ, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !