ಎಎಸ್‌ಬಿ ಮೈದಾನದಲ್ಲಿ ವಾಹನ ನಿಲ್ಲಿಸುವುದರಿಂದ ಇಲ್ಲಿ ಆಟವಾಡಲು ಕಷ್ಟವಾಗುತ್ತದೆ. ಕ್ರಿಕೆಟ್ ಬಾಲ್ ವಾಹನಗಳಿಗೆ ತಗಲುವ ಭಯ ಇರುತ್ತದೆ. ಹಾಗಾಗಿ ಎಎಸ್‌ಬಿ ಮೈದಾನದಲ್ಲಿ ಆಟವಾಡುವುದನ್ನೇ ಬಿಟ್ಟಿದ್ದೇವೆ
-ಮಹೇಶ್, ವಿದ್ಯಾರ್ಥಿ
ಇಲ್ಲಿ ಎರಡು ಮೂರು ಶಾಲಾ ಕಾಲೇಜುಗಳಿವೆ. ಕ್ರೀಡಾಸಕ್ತರು ವಾಯು ವಿಹಾರಿಗಳು ಓಡಾಡುತ್ತಿರುತ್ತಾರೆ. ಮೈದಾನಕ್ಕೆ ಪೊಲೀಸರು ಆಗಾಗ್ಗೆ ಭೇಟಿ ನೀಡಬೇಕು. ವಾಹನ ನಿಲುಗಡೆಗೆ ನಿಷೇಧಿಸಬೇಕು
-ದಿವಾಕರ್, ಆನೇಕಲ್ ನಿವಾಸಿ
ಆನೇಕಲ್ ಎಎಸ್‌ಬಿ ಮೈದಾನವನ್ನು ಅಭಿವೃದ್ಧಿ ಪಡಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ಮೈದಾನ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು.