ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಹೆಬ್ಬಗೋಡಿಗೆ ಆಗಮಿಸಿದ ಮೆಟ್ರೊ ರೈಲು ಬೋಗಿಗಳು

Published 15 ಫೆಬ್ರುವರಿ 2024, 7:58 IST
Last Updated 15 ಫೆಬ್ರುವರಿ 2024, 7:58 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಬೊಮ್ಮಸಂದ್ರದಿಂದ ಬೆಂಗಳೂರಿನ ಆರ್‌.ವಿ.ರಸ್ತೆಗೆ ಸಂಪರ್ಕ ಕಲ್ಪಿಸುವ ಮೆಟ್ರೊ ರೈಲಿನ ಬೋಗಿಗಳು ತಾಲ್ಲೂಕಿನ ಹೆಬ್ಬಗೋಡಿ ಮೆಟ್ರೊ ರೈಲು ಡಿಪೊಗೆ ಬಂದಿಳಿದಿದ್ದು, ಹಳದಿ ಮಾರ್ಗದಲ್ಲಿ ಸಂಚರಿಸಲು ಸಜ್ಜಾಗಿವೆ. ಹಳದಿ ಮಾರ್ಗವು ಚಾಲಕ ರಹಿತ ಮೆಟ್ರೊ ರೈಲಾಗಿದ್ದು ಚಾಲನೆಗೆ ಸಿದ್ದಗೊಂಡಿವೆ.

ಚೀನಾದ ಸಿಆರ್‌ಆರ್‌ಸಿ ನಾನ್‌ ಜಿಂಗ್‌ ಪುಜೆನ್‌ ಕಂಪನಿ ಲಿಮಿಟೆಡ್‌ನಿಂದ ತಯಾರಿಸಿರುವ ಮೆಟ್ರೊ ರೈಲು ಬೋಗಿಗಳು ಜನವರಿ 24ರಂದು ಬಂದರಿನಿಂದ ಹೊರಟು ಫೆ.3ರಂದು ಚೆನ್ನೈ ತಲುಪಿದ್ದವು. ಚೆನ್ನೈನಿಂದ ಕಂಟೈನರ್‌ಗಳ ಮೂಲಕ ಹೆಬ್ಬಗೋಡಿಗೆ ಬುಧವಾರ ತಲುಪಿವೆ.

ಬೊಮ್ಮಸಂದ್ರ ಆರ್‌.ವಿ.ರಸ್ತೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಚೀನಾದಿಂದ ಬರಬೇಕಾಗಿದ್ದ ಬೋಗಿಗಳ ಆಗಮನ ವಿಳಂಬದಿಂದಾಗಿ ಲೋಕಾರ್ಪಣೆ ತಡವಾಗಿತ್ತು ಎನ್ನಲಾಗಿದೆ. ಇದೀಗ ಬೋಗಿಗಳು ಬಂದಿರುವುದರಿಂದ ಮೆಟ್ರೊ ರೈಲು ಉದ್ಘಾಟನೆ ತ್ವರಿತವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಎರಡೂವರೆ ತಿಂಗಳ ಕಾಲ ಪ್ರಾಯೋಗಿಕ ಪರೀಕ್ಷೆ ನಡೆಸಲು ಸಿದ್ದತತೆ ಮಾಡಿಕೊಳ್ಳಲಾಗಿದೆ. ಮೆಟ್ರೊ ರೈಲು ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ ಮಾಡಿ ಅನುಮೋದನೆ ನೀಡಿದ ನಂತರ ಪ್ರಯಾಣಿಕರು ಸಂಚರಿಸಲು ಹಳದಿ ಮಾರ್ಗ ಮುಕ್ತವಾಗಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT