ಶುಕ್ರವಾರ, ನವೆಂಬರ್ 15, 2019
24 °C

ಚಿಜೃಂಭಣೆಯ ಅಣ್ಣಮ್ಮ ದೇವಿ ಉತ್ಸವ

Published:
Updated:
Prajavani

ಹೊಸಕೋಟೆ: ‘ದೇವರಲ್ಲಿ ನಂಬಿಕೆ ಇಟ್ಟವರಿಗೆ ಎಂದೂ ಮೋಸವಾಗುವುದಿಲ್ಲ’ ಎಂದು ಅಣ್ಣಮ್ಮ ದೇವಿ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ವೆಂಕಟೇಶ್ ತಿಳಿಸಿದರು. ಮೂರು ದಿನಗಳಿಂದ ನಗರದಲ್ಲಿ ನಡೆದ ಅಣ್ಣಮ್ಮ ದೇವಿ ಉತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

27 ವರ್ಷಗಳ ಹಿಂದೆ ಬೆಂಗಳೂರಿನಿಂದ ನಗರಕ್ಕೆ ತಂದು ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ದೇವಿ ಇಂದಿಗೂ ನಗರದ ಜನತೆಯನ್ನು ಕಾಪಾಡುತ್ತಿದ್ದು ಪ್ರತಿ ವರ್ಷವೂ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪುರಸ್ಕರಿಸಲಾಗುತ್ತದೆ ಎಂದರು.

ವಹ್ನಿಕುಲ ತಿಗಳರ ಯುವ ವೇದಿಕೆ ಅಧ್ಯಕ್ಷ ಎಚ್.ವಿ. ಅಖಿಲ್ ಕುಮಾರ್ ಮಾತನಾಡಿ ಪ್ರತಿವರ್ಷ ವೇದಿಕೆಯು ಉತ್ಸವದ ಜೊತೆಗೆ ಕ್ರೀಡಾಕೂಟಗಳನ್ನು ಮಾಡಿ ಹೊಸ ಪ್ರತಿಭೆಗಳನ್ನು ಗುರುತಿಸುತ್ತಿದೆ ಎಂದರು.

ನಗರದ ಪ್ರಮುಖ ಬೀದಿಗಳಲ್ಲಿ ದೇವಿಯ ಪಲ್ಲಕ್ಕಿ ಉತ್ಸವ ನಡೆಸಲಾಯಿತು ಮತ್ತು ಅನ್ನದಾನ ನಡೆಯಿತು.

ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಬಚ್ಚೇಗೌಡ, ನಗರ ಬಿಜೆಪಿ ಅಧ್ಯಕ್ಷ ಬೈರೇಗೌಡ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸಿ.ಮುನಿಯಪ್ಪ, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಸುಬ್ಬರಾಜು,ಮಾಜಿ ಪುರಸಭಾ ಅಧ್ಯಕ್ಷ ಸೋಮಸುಂದರ್ ಹಾಗೂ ಇತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)