ದೇವನಹಳ್ಳಿ: ಗುದದ್ವಾರದಲ್ಲಿ ಒಂದು ಕೆ.ಜಿ ಗೂ ಅಧಿಕ ಚಿನ್ನವನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸಿಕ್ಕಿಬಿದ್ದಿದ್ದಾನೆ.
ಬೇಹರೇನ್ ನಿಂದ ಆಗಮಿಸಿದ ಪ್ರಯಾಣಿಕ ನಾಲ್ಕು ಕ್ಯಾಪ್ಸುಲ್ ಗಳಲ್ಲಿ ಪೆಸ್ಟ್ ರೂಪದ ಚಿನ್ನವನ್ನು ಗುದದಲ್ಲಿ ಇರಿಸಿದ್ದ.
ಖಚಿತ ಮಾಹಿತಿಯ ಆಧಾರದ ಮೇಲೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬೇಹರೇನ್ ನಿಂದ ಬಂದ ಎಲ್ಲ ಪ್ರಯಾಣಿಕರನ್ನು ಶೋಧನೆ ಮಾಡಿದಾಗ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ.
ಬಂಧಿತನಿಂದ ಒಟ್ಟು 1,171 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ₹65.03 ಲಕ್ಷ ಎಂದು ಅಂದಾಜಿಸಲಾಗಿದೆ.
ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.