ದೊಡ್ಡಬಳ್ಳಾಪುರ: ಕಳೆದ ಏಪ್ರಿಲ್ನಲ್ಲಿ ನಡೆದ 2019ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.79.69 ರಷ್ಟು ಫಲಿತಾಂಶ ಪಡೆಯುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4ನೇ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪ ರೆಡ್ಡಿ ತಿಳಿಸಿದ್ದಾರೆ.

ಫಲಿತಾಂಶ ಕುರಿತು ಮಾಹಿತಿ ನೀಡಿ, ಈ ಬಾರಿ ತಾಲ್ಲೂಕಿನಲ್ಲಿ ಒಟ್ಟು 56 ಪ್ರೌಢ ಶಾಲೆಗಳಿಂದ 1,640 ಬಾಲಕರು ಹಾಗೂ 1,676 ಬಾಲಕಿಯರು ಸೇರಿ 3,316 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 1,261 ಬಾಲಕರು, 1,390 ಬಾಲಕಿಯರು ಸೇರಿ ಒಟ್ಟು 2,651 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಸಾಲಿನಲ್ಲಿ. ಶೇ 80 ರಷ್ಟು ಫಲಿತಾಂಶ ಗಳಿಸಿ ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದಿತ್ತು.

ಸರ್ಕಾರಿ ಪ್ರೌಢ ಶಾಲೆಗಳು ಶೇ79.31, ಅನುದಾನಿತ ಶಾಲೆಗಳು ಶೇ73.10 ಹಾಗೂ ಅನುದಾನರಹಿತ ಶಾಲೆಗಳು ಶೇ87.48 ಫಲಿತಾಂಶ ಗಳಿಸಿವೆ.

ತಾಲ್ಲೂಕಿನ ಕಾಡನೂರು ಕೈಮರದ ಶ್ರೀರಾಮ ಪ್ರೌಢ ಶಾಲೆಯ ನಾಗೇಂದ್ರಕುಮಾರ್ 619 ಅಂಕಗಳನ್ನು ಗಳಿಸಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿದ್ದಾನೆ.

ಕೊಡಿಗೆಹಳ್ಳಿಯ ಜ್ಞಾನಗಂಗಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆರ್.ವಿ. ಲಿಖಿತ 616 ಪಡೆದು ತಾಲ್ಲೂಕಿಗೆ ದ್ವಿತೀಯ ಸ್ಥಾನ, ನಗರದ ಕಾರ್ಮಲ್ ಜ್ಯೋತಿ ಪ್ರೌಢ ಶಾಲೆಯ ಸುಪ್ರೀತ್ ಆರ್. ಬೆಟದೂರು 615 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.

ಉಳಿದಂತೆ ಶ್ರೀರಾಮ ಪ್ರೌಢ ಶಾಲೆಯ ಕಿಶನ್ಗೌಡ (614), ಗೋಪಾಲ ಗೌಡ (613), ಸರಸ್ವತಿ ಪ್ರೌಢ ಶಾಲೆಯ ತರುಣ್ ಪ್ರಸಾದ್ (613), ಮೆಳೇಕೋಟೆ ಕ್ರಾಸ್ ಎಸ್ಜೆಸಿಆರ್ ಶಾಲೆಯ ಎ.ಸಿ. ತೃಪ್ತಿ (608), ಕಾರ್ಮಲ್ ಜ್ಯೋತಿ ಪ್ರೌಢ ಶಾಲೆಯ ಯೋಗೇಶ್ (608), ನಳಂದ ಪ್ರೌಢ ಶಾಲೆಯ ವತ್ಸಲ (607), ಮೆಳೇಕೋಟೆ ಕ್ರಾಸ್ ಎಸ್ಜೆಸಿಆರ್ ಶಾಲೆಯ ಆರ್. ವರ್ಷಿತ (606), ತಾಲ್ಲೂಕಿಗೆ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ತಾಲ್ಲೂಕಿನ ಹಣಬೆ ಸರ್ಕಾರಿ ಪ್ರೌಢ ಶಾಲೆಯ ಕಲ್ಯಾಣ್ಕುಮಾರ್ 601 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ. ಉಳಿದಂತೆ ಕನ್ನಡ ಮಾಧ್ಯಮದಲ್ಲಿ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಬಿ. ಮೋನಿಕ (589), ಪವನ್ ಕುಮಾರ್(582), ಕಾಡತಿಪ್ಪೂರು ಸರ್ಕಾರಿ ಪ್ರೌಢ ಶಾಲೆಯ ಪರಮೇಶ್ (578), ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗದ ಎಲ್. ಚಂದನ (577), ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಅಂಜಲಿ (575) ಅರಳು ಮಲ್ಲಿಗೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವೈ.ಆರ್. ನವೀನ್ಕುಮಾರ್ (575), ಕೊನಘಟ್ಟ ಸರ್ಕಾರಿ ಪ್ರೌಢ ಶಾಲೆಯ ಗಗನ ಸಿಂಧು (575) ಅಂಕ ಪಡೆದಿದ್ದಾರೆ.

ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಹುಲಿಕುಂಟೆ ಸರ್ಕಾರಿ ಪ್ರೌಢ ಶಾಲೆಯ ಕೆ.ಕೀರ್ತನ (590), ಕನಸವಾಡಿ ಸರ್ಕಾರಿ ಪ್ರೌಢ ಶಾಲೆಯ ಸಾವಿಯಾಕೌಸರ್ (579), ದೊಡ್ಡಬೆಳವಂಗಲ ಸರ್ಕಾರಿ ಪ್ರೌಢ ಶಾಲೆಯ ಕೆ.ಚಂದನ (579), ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಪಿ.ಇಂದು (577),ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗದ ಟಿ.ಆರ್.ಪಲ್ಲವಿ (575)ಅಂಕ ಗಳಿಸಿದ್ದಾರೆ.

ಶೇ100 ಫಲಿತಾಂಶ ಪಡೆದ ಶಾಲೆಗಳು: ತಾಲ್ಲೂಕಿನ 56 ಪ್ರೌಢ ಶಾಲೆಗಳ ಪೈಕಿ 7 ಪ್ರೌಢ ಶಾಲೆಗಳು ಶೇ 100 ಫಲಿತಾಂಶ ಗಳಿಸಿವೆ.

ಮೆಳೇಕೋಟೆ ಕ್ರಾಸ್ನಲ್ಲಿರುವ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಗ್ರಾಮಾಂತರ ಪ್ರೌಢ ಶಾಲೆ, ಅರಳುಮಲ್ಲಿಗೆ ಸರ್ಕಾರಿ ಪ್ರೌಢ ಶಾಲೆ, ಪುರುಷನಹಳ್ಳಿ ಸಿದ್ಧಗಂಗಾ ಪ್ರೌಢ ಶಾಲೆ, ದೊಡ್ಡಬೆಳವಂಗಲದ ಜ್ಞಾನವಾಹಿನಿ ಆಂಗ್ಲ ಪ್ರೌಢ ಶಾಲೆ, ದೊಡ್ಡಬಳ್ಳಾಪುರದ ಕಾರ್ಮಲ್ ಜ್ಯೋತಿ ಪ್ರೌಢ ಶಾಲೆ, ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಪ್ರೌಢ ಶಾಲೆ, ಬಾಶೆಟ್ಟಿಹಳ್ಳಿಯ ನಿಖಿಲ ವಿದ್ಯಾನಿಕೇತನ ಶಾಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.