ದೊಡ್ಡಬಳ್ಳಾಪುರ: ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) 300ನೇ ಜಯಂತಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಚರಿಸಲಾಯಿತು.

ಯೋಗಿ ನಾರಾಯಣ ಯತೀಂದ್ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ಯೋಗಿ ನಾರೇಯಣ ಯತೀಂದ್ರರು ಕಾಲಜ್ಞಾನಿಗಳಾಗಿ, ಬದುಕಿನ ಮೌಲ್ಯ, ಮಾನವೀತೆಯ ಸಂದೇಶ ಸಾರಿದ್ದಾರೆ. ಕೈವಾರ ತಾತಯ್ಯ ಅವರು ತತ್ವ ಪದಗಳ ಮೂಲಕ ಬರೆದಿರುವ ಸಂಗತಿಗಳು ಬಹುತೇಕ ಸತ್ಯವಾಗಿವೆ. ದಾರ್ಶನಿಕರಾಗಿ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಿದ ಇಂತಹ ಮಹನೀಯರ ಆದರ್ಶಗಳನ್ನು ಇಂದಿನ ಪೀಳಿಗೆ ಅರಿಯಬೇಕಿದೆ ಎಂದರು.

ಯೋಗ ಶಿಕ್ಷಕ ಶ್ರೀಕಾಂತ್ ಮಾತನಾಡಿ, ಬಳೆ ಮಾರಾಟದ ಕುಲ ಕಸುಬನ್ನಾಗಿರಿಸಿಕೊಂಡಿದ್ದ ಯೋಗಿನಾರಾಯಣ ಯತೀಂದ್ರರು ಕೈವಾರ ತಾತಯ್ಯ ಎಂದು ಪ್ರಸಿದ್ಧರಾಗಿದ್ದರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದರು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಅಧ್ಯಾತ್ಮದಲ್ಲಿನ ಚಿಂತನ ಮಂಥನ ನಡೆಸುವುದರಲ್ಲಿ ಮಗ್ನನಾಗಿರುತ್ತಿದ್ದ ಅವರು ಮುಂದೆ ನಮ್ಮ ಬದುಕಿನ ಮೌಲ್ಯಗಳನ್ನು ಹಾಗೂ ಭವಿಷ್ಯವನ್ನು ಬಿಂಬಿಸುವ ಕಾಲಜ್ಞಾನದ ಮೂಲಕ ಸಮಾಜದ ದಾರ್ಶನಿಕರಾದರು ಎಂದರು.

ಬಲಿಜ ಸಮುದಾಯವನ್ನು 2ಎ ಪ್ರವರ್ಗಕ್ಕೆ ಪೂರ್ಣ ಪ್ರಮಾಣಕ್ಕೆ ಸೇರಿಸಬೇಕೆಂದು ಮುಖಂಡರು ಮನವಿ ಮಾಡಿದರು. ಸಮುದಾಯದ ಹಿರಿಯರಾದ ರಾಮಚಂದ್ರಪ್ಪ, ವೆಂಕಟರಮಣಯ್ಯ, ವೆಂಕಟೇಶಪ್ಪ, ಕೃಷ್ಣಯ್ಯ, ರಾಜಣ್ಣ ಅವರನ್ನು ಸನ್ಮಾನಿಸಲಾಯಿತು.

ತಹಶೀಲ್ದಾರ್ ಮಲ್ಲಪ್ಪ.ಕೆ.ಯರಗೋಳ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ನಗರಸಭಾ ಸದಸ್ಯ ಆನಂದ್, ಶಿಕ್ಷಕ ರಾಜಶೇಖರ್, ಇಂದ್ರಾಣಿ, ಬಿಇಒ ಶಂಕರಯ್ಯ, ತಾಲ್ಲೂಕು ಯೋಗಿನಾರಾಯಣ ಯತೀಂದ್ರ ಬಲಿಜ ಸಂಘದ ಅಧ್ಯಕ್ಷ ಟಿ.ಜಿ.ಮಂಜುನಾಥ್, ಪ್ರಸನ್ನಕುಮಾರ್, ವೆಂಕಟರಮಣಪ್ಪ, ಪಿಳ್ಳವೆಂಕಟಪ್ಪ, ಪ್ರಕಾಶ್, ಬಲಿಜ ಯುವ ಸಂಘದ ಅಧ್ಯಕ್ಷ ಎನ್.ಶ್ರೀನಾಥ್, ಸಂಘಟನಾ ಕಾರ್ಯುದರ್ಶಿ ಜವಾಜಿರಾಜೇಶ್, ರಾಮಾಂಜಿನಪ್ಪ, ರಾಜಣ್ಣ, ವೆಂಕಟರಮಣಪ್ಪ, ಕೃಷ್ಣಮೂರ್ತಿ, ಸುರೇಶ್, ಮುರಳಿ, ಸುನಿಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.