ಹೊಸಕೋಟೆ: ‘ಥೂ ಗಬ್ಬುನಾತ... ಇಲ್ಲಿ ಹೆಂಗಪ್ಪ ಟಾಯ್ಲೆಟ್ಗೆ ಹೋಗೋದು...‘

–ನಗರಸಭೆಯ ಮಳಿಗೆಯಲ್ಲಿರುವ ಶೌಚಾಲಯ ಪ್ರವೇಶಿಸುವ ಪ್ರತಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೇಳುವ ಅಸಹ್ಯದ ಮಾತಿದು.

ನಗರದಲ್ಲಿ ಒಟ್ಟು 31 ವಾರ್ಡುಗಳಿದ್ದು, ಸುಮಾರು ಒಂದು ಲಕ್ಷದಷ್ಟು ಜನಸಂಖ್ಯೆ ಇದೆ. ನಿತ್ಯ ಒಂದಲ್ಲ ಒಂದು ಕಾರಣಕ್ಕೆ ನಗರಸಭೆಗೆ ನೂರಾರು ಮಂದಿ ಹೋಗುತ್ತಾರೆ. ಆದರೆ ನಗರಸಭೆ ಕಚೇರಿ ಸಮೀಪ ಮಳಿಗೆಯಲ್ಲಿ ಸಾರ್ವಜನಿಕರು ಮತ್ತು ಪೌರಕಾರ್ಮಿಕರಿಗೆ ನಿರ್ಮಿಸಿರುವ ಶೌಚಾಲಯ ಗುಬ್ಬು ನಾರುತ್ತಿದೆ. ನಿರ್ವಹಣೆ ಇಲ್ಲದೆ ಬಳಕೆಯ ಯೋಗ್ಯತೆಯನ್ನೇ ಕಳೆದುಕೊಂಡಿದೆ.

ಮೊದಲ ಬಾರಿಗೆ ಬರುವವರು ಮತ್ತು ತೀರ ಅವಸರ ಅದವರೂ ಮಾತ್ರ ಅನಿವಾರ್ಯವಾಗಿ ಶೌಚಾಲಯ ಬಳಸುತ್ತಾರೆ. ಒಮ್ಮೆ ಈ ಶೌಚಾಲಯ ಬಳಸಿದವರೂ ಇತ್ತು ಸುಳಿಯುವುದೂ ಇಲ್ಲ. ಅಷ್ಟು ಕೆಟ್ಟದಾಗಿದೆ ಈ ಶೌಚಾಲಯ.

ದಿನ ನಿತ್ಯ ನೂರಾರು ಜನರು ಬಂದು ಹೋಗುವ ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರಿಗೆ ಬಳಸಲು ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲದೆ ನಿತ್ಯ ಕರ್ಮಗಳಿಗೆ ತುರ್ತು ಎನಿಸಿದಾಗ ಪರದಾಡುವಂತಾಗಿದೆ.

ನಿರ್ವಹಣೆ ಇಲ್ಲದೆ ಶೌಚಾಲಯದಲ್ಲಿ ಗಲೀಜು ತಾಂಡವವಾಡುತ್ತಿದೆ. ದುರ್ನಾತ ಹೊರಗೆ ಓಡಾಡುವ ಜನರಿಗೂ ತಟ್ಟುತ್ತಿದೆ. ಈ ಶೌಚಾಲಯವು ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ.

ನಗರಸಭೆ ಕಚೇರಿಯಲ್ಲಿ ಸಭೆ ಸಮಾರಂಭಗಳಿದ್ದರೆ, ಅಥವಾ ಗಣ್ಯರು ಬಂದರೆ ಮಾತ್ರ ಈ ಶೌಚಾಲಯಗಳಿಗೆ ಸ್ವಚ್ಛತೆ ಭಾಗ್ಯ ದೊರೆಯುತ್ತದೆ. ಅದೂ ಬೀಚಿಂಗ್ ಪೌಡರ್ ಸಿಂಪಡಣೆಗೆ ಮಾತ್ರ ಸೀಮಿತವಾಗಿರುತ್ತದೆ.

ಮಹಿಳೆ ಮತ್ತು ಪುರುಷರ ಶೌಚಾಲಯಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದರೂ ಪೌರಕಾರ್ಮಿಕರು ಮತ್ತು ಸಾರ್ವಜನಿಕರು ಬೇರೆ ವಿಧಿ ಇಲ್ಲದೆ ಬಳಸುತ್ತಿದ್ದಾರೆ. ಕೆಲವರು ಈ ಶೌಚಾಲಯವೆಂದರೇ ಭಯಬಿದ್ದು, ಬಯಲಿಗೆ ಹೋಗುತ್ತಿದ್ದಾರೆ.

ಅಧಿಕಾರಿಗಳಿಗೆ ದುರ್ವಾಸನೆಯೇ ಸುವಾಸನೆಯೇ...?

ನಗರಸಭೆಯ ಪೌರಾಯುಕ್ತರ ಕಚೇರಿ ಇದೇ ಮಳಿಗೆಗೆ ಅಂಟಿಕೊಂಡಿದೆ. ಅಲ್ಲದೆ ಮಳಿಗೆಗಳ ಮಹಡಿಯ ಮೆಲೆ ನಗರಸಭೆಯ ಕೆಲವು ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಚೇರಿಗಳಲ್ಲಿರುವ ಅಧಿಕಾರಿಗಳ ಮೂಗಿಗೆ ಶೌಚಾಲಯಗಳ ದುರ್ವಾಸನೆ ಬಡಿದರೂ ಸಹಿಸಿಕೊಂಡಿದ್ದಾರೆಯೇ ಹೊರತು ಶೌಚಾಲಯ ಸ್ವಚ್ಛತೆ ಕ್ರಮ ಕೈಗೊಂಡಿಲ್ಲ. ನಗರಸಭೆ ಅಧಿಕಾರಿಗಳಿಗೆ ಶೌಚಾಲಯದ ದುರ್ವಾಸನೆ ಸುವಾಸನೆಯೇ ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.

ಶೌಚಾಲಯದ ಕಮೋಡ್ಗಳು ಸಂಪೂರ್ಣವಾಗಿ ಹಾಳಾಗಿವೆ. ಶೌಚಾಲಯದ ಒಳಗೆ ಕಾಲಿಟ್ಟರೆ ದುರ್ವಾಸನೆಗೆ ಮೂಗು ಕಟ್ಟುತ್ತದೆ. ಈ ಜನ್ಮದನಲ್ಲಿ ಇಲ್ಲಿಗೆ ಬರಬಾರದು ಎಂಬ ಯಾತನೆ ಭಾವನೆ ಮೂಡುತ್ತದೆ. ಆದರೆ ಅಧಿಕಾರಿಗಳು ತಮಗೆ ಮೂಗು ಇಲ್ಲ, ಕಣ್ಣೂ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸೂಕ್ತ ನಿರ್ವಹಣೆಗೆ ಕ್ರಮ

ನಗರಸಭೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಮಳಿಗೆಯಲ್ಲಿ ನಿರ್ಮಾಣ ಮಾಡಿರುವ ಶೌಚಾಲಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದರೆ ರಾತ್ರಿ ವೇಳೆ ಕಚೇರಿಗೆ ಯಾವುದೇ ಕಾವಲು ಸಿಬ್ಬಂದಿ ಇಲ್ಲದ ರಾತ್ರಿ ವೇಳೆ ಕೆಲವು ಕುಡುಕರು ಶೌಚಾಲಯ ಹಾಳು ಮಾಡುತ್ತಿದ್ದಾರೆ. ಆದಷ್ಟು ಬೇಗ ಕಚೇರಿಗೆ ಒಬ್ಬ ಕಾವಲುಗಾರರನ್ನು ನೇಮಿಸಲಾಗುವುದು. ಶೌಚಾಲಯವನ್ನು ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ನೀಲಾ ಲೋಚನ ಪ್ರಭು, ಪೌರಾಯುಕ್ತ, ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.