ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಲಿಬೆಲೆ | ಪರೀಕ್ಷೆ ನಡೆಯುತ್ತಿರುವಾಗಲೇ ಕಾಲೇಜು ಆರಂಭ!

ಬೆಂಗಳೂರು ಉತ್ತರ ವಿ.ವಿಯ ಆದೇಶಕ್ಕೆ ವಿದ್ಯಾರ್ಥಿ, ಉಪನ್ಯಾಸಕರ ಆಕ್ರೋಶ
Last Updated 19 ನವೆಂಬರ್ 2022, 6:25 IST
ಅಕ್ಷರ ಗಾತ್ರ

ಸೂಲಿಬೆಲೆ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕ ಪದವಿ ಕಲಾ ನಿಕಾಯದ 2ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿರುವಾಗಲೇ, ಕಾಲೇಜು ಆರಂಭಿಸಲು ಆದೇಶ ಮಾಡಿ ವೇಳಾಪಟ್ಟಿ ಬಿಡುಗಡೆ ಮಾಡಿರುವುದಕ್ಕೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾಲಯ ಕಲಾ ನಿಕಾಯದ ಸ್ನಾತಕ ಪದವಿಯ 2ನೇ ಸೆಮಿಸ್ಟರ್‌ ಪರೀಕ್ಷೆಗಳು ನಡೆಯುತ್ತಿದ್ದು, ಇದೇ 25 ರಂದು ಪರೀಕ್ಷೆ ಮುಕ್ತಾಯಗೊಳ್ಳಲಿದೆ. ಆದರೆ ನ. 7ರಿಂದಲೇ ತರಗತಿ ಆರಂಭಿಸುವಂತೆ ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ.

ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ ಪದವಿಯ 3 ಮತ್ತು 5ನೇ ಸೆಮಿಸ್ಟರ್ ತರಗತಿ ವೇಳಾಪಟ್ಟಿ ಆದೇಶವನ್ನು
ವಿಶ್ವವಿದ್ಯಾಲಯ ಹೊರಡಿಸಿದೆ.

ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ ಪದವಿಗೆ ಪರೀಕ್ಷೆ ಮುಕ್ತಾಯವಾಗಿದ್ದು, ತರಗತಿ ಆರಂಭಿಸಲು ಯಾವುದೇ ಅಡ್ಡಿಯಿಲ್ಲ. ಆದರೆ ಬಿ.ಎ ವಿದ್ಯಾರ್ಥಿಗಳಿಗೆ ಇನ್ನೂ ಪರೀಕ್ಷೆ ಮುಗಿದಿಲ್ಲ. ಇವರಿಗೆ ತರಗತಿ ಆರಂಭಿಸುವುದು ಹೇಗೆ ಎನ್ನುವುದು ಪ್ರಾಧ್ಯಾಪಕರ ಪ್ರಶ್ನೆ.

ಬಿ.ಎ ಪದವಿಯ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 25 ರಂದು ಪರೀಕ್ಷೆಗಳು ಮುಕ್ತಾಯವಾಗುತ್ತವೆ. ಆದರೆ, ನ.7 ರಿಂದ ತರಗತಿಗಳು ಆರಂಭಿಸುವಂತೆ ಆದೇಶಿಸಿರುವುದು ಎಷ್ಟು ಸಮಂಜಸ. ರಜೆ ಇಲ್ಲದೆ ವಿದ್ಯಾರ್ಥಿಗಳು ಮತ್ತೆ ತರಗತಿ ಕೂರುವುದು ಸರಿಯಲ್ಲ.
ಇದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೂ ಒತ್ತಡ ಬೀಳುತ್ತದೆ ಎಂದು ಹೆಸರೇಳಲು ಇಚ್ಛಿಸದ ಉಪನ್ಯಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ತಯಾರಿ, ಕಲಿಕೆಗೆ ಅಡ್ಡಿ

‘ಪರೀಕ್ಷೆ ಮುಗಿದ ಮೇಲೆ ತರಗತಿಗಳು ಆರಂಭಿಸಬೇಕು. ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ವಿಶ್ವ ವಿದ್ಯಾಲಯ ತರಗತಿ ಆರಂಭಿಸುವಂತೆ ಆದೇಶ ಹೊರಡಿಸಿರುವುದು ಪ್ರಸ್ತುತ ಪರೀಕ್ಷೆ ತಯಾರಿಗೂ ಅಡ್ಡಿಯಾಗಿದೆ. ಅಧ್ಯಯನ ಮತ್ತು ಕಲಿಕೆಗೆ ತೊಂದರೆಯಾಗುತ್ತಿದೆ’ ಎಂದು ವಿದ್ಯಾರ್ಥಿನಿ ಹೇಮಾವತಿ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಗೊಂದಲ

‘ಪರೀಕ್ಷೆ ನಡೆಯುತ್ತಿರುವುದರಿಂದ, ಪರೀಕ್ಷೆಗಳು ಮುಗಿದ ಮೇಲೆ ತರಗತಿಗಳನ್ನು ನಡೆಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟು ಮಾಡುವಂತಹ ರೀತಿಯಲ್ಲಿ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ. ಪಾಲನೆ ಮಾಡುವುದು ಅನಿವಾರ್ಯವಾಗಿದೆ ಎಂದು ವಿದ್ಯಾರ್ಥಿನಿ ಕಲ್ಯಾಣಿ ತಿಳಿಸಿದರು.

ವೇಳಾಪಟ್ಟಿ ಸರಿದೂಗಿಸಲು ಆದೇಶ

ಕೊರೊನಾ ಕಾಲಘಟ್ಟದಲ್ಲಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವ್ಯತ್ಯಯ ಆಗಿತ್ತು. ಅದನ್ನು ಸರಿದೂಗಿಸಲು ನಿಟ್ಟಿನಲ್ಲಿ ಪದವಿ ತರಗತಿಗಳು ಆರಂಭಿಸುವಂತೆ ಆದೇಶಿಸಲಾಗಿದೆ. ಪರೀಕ್ಷೆಗಳು ನಡೆಯುತ್ತಿರುವ ವಿದ್ಯಾರ್ಥಿಗಳ ಪಠ್ಯಗಳಿಗೆ ತೊಂದರೆ ಆಗದಂತೆ ಭಾನುವಾರ ಹಾಗೂ ರಜೆ ದಿನಗಳಲ್ಲಿ ತರಗತಿಗಳು ತೆಗೆದುಕೊಂಡು ಪಠ್ಯ ಪೂರ್ಣಗೊಳಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಕುಲಸಚಿವ ಡಾ.ಡೊಮಿನಿಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT