ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ₹51ಲಕ್ಷ ನಗದು, ಚಿನ್ನ ಜಪ್ತಿ

ಚಿನ್ನ ಜಪ್ತಿ
Published 5 ಮಾರ್ಚ್ 2024, 13:43 IST
Last Updated 5 ಮಾರ್ಚ್ 2024, 13:43 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆ.29 ಹಾಗೂ ಮಾರ್ಚ್‌ 1 ಬೆಳಗಿನ ಜಾವ ಬೆಂಗಳೂರು ವೈಮಾನಿಕ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ರಾತ್ರಿ ಗಸ್ತಿನಲ್ಲಿ ಇಬ್ಬರು ಪ್ರಯಾಣಿಕರಿಂದ ಪ್ರತ್ಯೇಕ ಪ್ರಕರಣದಲ್ಲಿ ನಗದು, ಚಿನ್ನ ವಶಕ್ಕೆ ಪಡೆದಿದ್ದಾರೆ.

ಅಪರಾಧ ಹಿನ್ನಲೆಯುಳ್ಳ ಪ್ರಯಾಣಿಕನೊಬ್ಬ ಕೌಲಾಲಂಪುರಕ್ಕೆ ತೆರಳುವಾಗ ಕೈಚೀಲದಲ್ಲಿ ₹500 ಮುಖಬೆಲೆಯ ₹51 ಲಕ್ಷದ 95 ‌ಸಾವಿರ ಕೊಂಡೊಯ್ಯುವಾಗ ತಪಾಸಣೆ ಪ್ರಕ್ರಿಯೆಯಲ್ಲಿ ಸಿಕ್ಕಿ ಬಿದ್ದಿದ್ದು ನಗದು ಜಪ್ತಿ ಮಾಡಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ದುಬೈನಿಂದ ಆಗಮಿಸಿದ್ದ ಥೈಲ್ಯಾಂಡ್‌ ದೇಶದ ಪ್ರಯಾಣಿಕರೊಬ್ಬರ ಬಳಿ ಪೇಸ್ಟ್‌ ರೂಪದ 824 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ ₹50.79ಲಕ್ಷ ಎಂದು ತಿಳಿದು ಬಂದಿದೆ.

ಭಾರತೀಯ ಮೂಲದ ಪ್ರಯಾಣಿಕನಿಂದ ವಶಕ್ಕೆ ಪಡೆದ 500 ಮುಖಬೆಲೆಯ ನಗದು ಹಣ
ಭಾರತೀಯ ಮೂಲದ ಪ್ರಯಾಣಿಕನಿಂದ ವಶಕ್ಕೆ ಪಡೆದ 500 ಮುಖಬೆಲೆಯ ನಗದು ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT