ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌: ಆನೆ ಮೇಲೆ ಬಂದ ಬಿಎಸ್‌ಪಿ ಅಭ್ಯರ್ಥಿ

Last Updated 18 ಏಪ್ರಿಲ್ 2023, 4:13 IST
ಅಕ್ಷರ ಗಾತ್ರ

ಆನೇಕಲ್: ಆನೇಕಲ್‌ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಡಾ.ಚಿನ್ನಪ್ಪ.ವೈ.ಚಿಕ್ಕಹಾಗಡೆ ಕೃತಕ ಆನೆ ಕುಳಿತು ತಾಲ್ಲೂಕು ಕಚೇರಿಯವರೆಗೂ ಆಗಮಿಸಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಎಎಸ್‌ಬಿ ಮೈದಾನದಿಂದ ತಾಲ್ಲೂಕು ಕಚೇರಿಯವರೆಗೂ ಬೃಹತ್‌ ಮೆರವಣಿಗೆ ನಡೆಸಿದರು.

ತಮಟೆ, ಗಾರುಡಿಗೊಂಬೆ, ಮಹಿಳೆಯರ ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಕೃತಕ ಆನೆಯ ಮೇಲೆ ಕುಳಿತು ಅಭ್ಯರ್ಥಿ ಚಿನ್ನಪ್ಪ.ವೈ.ಚಿಕ್ಕಹಾಗಡೆ ಅವರು ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿಗೆ ಆಗಮಿಸಿದರು. ಪಟ್ಟಣದ ಅಂಬೇಡ್ಕರ್‌ ಪುತ್ಥಳಿಗೆ ಮಾಲಾಪರ್ಣೆ ಮಾಡಿ ಮೆರವಣಿಗೆ ಚಾಲನೆ ನೀಡಲಾಯಿತು.

ಡಾ.ಚಿನ್ನಪ್ಪ.ವೈ.ಚಿಕ್ಕಹಾಗಡೆ ಮಾತನಾಡಿ, ಆನೇಕಲ್‌ನಲ್ಲಿ ಈ ಬಾರಿ ಬಿಎಸ್‌ಪಿ ಅಧಿಕಾರಕ್ಕೆ ಬರುವುದು ಖಚಿತ. ತಾಲ್ಲೂಕಿನೆಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಆನೇಕಲ್‌ ತಾಲ್ಲೂಕಿನಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು. ಆನೇಕಲ್‌ನಲ್ಲಿ ಕೈಗಾರಿಕ ಪ್ರದೇಶಗಳಿದ್ದರೂ ನಿರುದ್ಯೋಗ ಸಮಸ್ಯೆಗಳಿವೆ. ತಾಲ್ಲೂಕಿನಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಬಾರಿ ಜನತೆ ಬಿಎಸ್‌ಪಿ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಬಿಎಸ್‌ಪಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಲ್‌.ಮುನಿಯಲ್ಲಪ್ಪ ಮಾತನಾಡಿ, ಚಿನ್ನಪ್ಪ.ವೈ.ಚಿಕ್ಕಹಾಗಡೆ ಅವರು ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿದ್ದು ಸಮಾಜ ಸೇವೆಯ ಗುರಿಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜನತೆಯು ಚಿನ್ನಪ್ಪ ಅವರಿಗೆ ಮತ ನೀಡುವ ಮೂಲಕ ತಾಲ್ಲೂಕಿನಲ್ಲಿ ಅಭಿವೃದ್ಧಿಗೆ ಬಲ ನೀಡಬೇಕು ಎಂದರು.

ಬಿಎಸ್‌ಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ.ಎಚ್‌.ಎನ್‌.ಯಲ್ಲಾರೆಡ್ಡಿ, ಗೌರಿಶಂಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೆಡ್ಡಿ, ತಾಲ್ಲೂಕು ಉಸ್ತುವಾರಿ ಮಾಯಸಂದ್ರ ಸಂಪಂಗಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಎಸ್‌.ಕುಮಾರಾಚಾರಿ, ಜಿಲ್ಲಾ ಕಾರ್ಯದರ್ಶಿ ಲೋಕೇಶಾಚಾರಿ, ಕಾರ್ಯದರ್ಶಿಗಳಾದ ಸರ್ಜಾಪುರ ಲೋಕೇಶ್‌, ಮಹಿಳಾ ಘಟಕದ ಅಧ್ಯಕ್ಷೆ ವರಲಕ್ಷ್ಮೀರೆಡ್ಡಿ, ಮುಖಂಡರಾದ ಇಂಡ್ಲಬೆಲೆ ಗಾಯತ್ರಿ, ಪುಷ್ಪಲತಾ, ಗೀತಲಕ್ಷ್ಮೀ, ನೇತ್ರಾವತಿ, ವನಜಾಕ್ಷಿ, ರತ್ನಮ್ಮ, ಪೊಲೀಸ್‌ ಪಾಪಣ್ಣ, ತೌಸಿಫ್‌ ಅಹಮದ್‌, ಬುಲೆಟ್‌ ಕೃಷ್ಣಪ್ಪ, ಗುಡ್ಡಹಟ್ಟಿ ನಾಗರಾಜು, ಕಿರಣ್, ಪ್ರಸನ್ನ, ಶಿವು, ಪ್ರವೀಣ್‌, ಕೃಷ್ಣಮೂರ್ತಿ, ಚೊಕ್ಕಸಂದ್ರ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT