ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಹುದ್ದೆ ನಿಭಾಯಿಸುತ್ತೇನೆ: ಸಿ.ಪಿ.ಯೋಗೇಶ್ವರ್

ನೂತನ ಸಚಿವರಿಗೆ ರಾಮನಗರ, ಚನ್ನಪಟ್ಟಣದಲ್ಲಿ ಭವ್ಯ ಸ್ವಾಗತ l ಕಾರ್ಯಕರ್ತರಿಂದ ಬೈಕ್‌ ರ್‍ಯಾಲಿ ಸಂಭ್ರಮ
Last Updated 19 ಜನವರಿ 2021, 1:36 IST
ಅಕ್ಷರ ಗಾತ್ರ

ರಾಮನಗರ: ‘ಖಾತೆ ಹಂಚಿಕೆಯ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಅವರು ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ನೂತನ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಸೋಮವಾರ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಸ್ವೀಕರಿಸಿ ಅವರು ಮಾತನಾಡಿದರು. ಇಂತಹದ್ದೇ ಖಾತೆ ಕೊಡಿ ಎಂದು ನಾನು ಅವರಿಗೆ ಮನವಿ ಮಾಡಿಲ್ಲ. ನೀಡುವ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ.ಪಕ್ಷ ನೀಡಿರುವ ಸಚಿವ ಸ್ಥಾನವನ್ನು ಬಳಸಿಕೊಂಡು ತಾಲೂಕನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತೇನೆ ಎಂದು ಹೇಳಿದರು.

ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ನನ್ನನ್ನು ಸ್ವಾಗತಿಸಿರುವುದು ಸಂತೋಷ ತಂದಿದೆ. ಈ ಅದ್ದೂರಿ ಸ್ವಾಗತ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು ಹಾಗೂ ಜಿಲ್ಲೆಯ ಬಿಜೆಪಿ ಮುಖಂಡರು ಈ ಸಂದರ್ಭ ಜೊತೆಗಿದ್ದರು.

ವಿವಿಧೆಡೆ ಸನ್ಮಾನ: ನೂತನ ಸಚಿವರನ್ನು ಬಿಡದಿಯಿಂದ ಚನ್ನಪಟ್ಟಣದವರೆಗೂ ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಸ್ವಾಗತ ಮಾಡಿದರು. ಬಿಡದಿಯ ಬೈರಮಂಗಲ ಕ್ರಾಸ್‍ನಲ್ಲಿ ಪ್ರತಿಭಟನಾ ನಿರತರ ಕಾರ್ಮಿಕರು, ಸಿಪಿವೈಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಈ ವೇಳೆ ಸಮಸ್ಯೆ ಬಗೆಹಿರಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್‌, ಮೂರ್ನಾಲ್ಕು ದಿನದಲ್ಲಿ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದರು. ನಂತರ ಬೈರಮಂಗಲ ಕ್ರಾಸ್‍ನಿಂದ ಹಿಡಿದು ಬಿಡದಿ ಬಿಜಿಎಸ್‌ ವೃತ್ತದವರೆಗೆ, ಅಭಿಮಾನಿಗಳು ಸಿಪಿವೈ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದರು.

ಬಿಡದಿಯ ಬಿಜಿಎಸ್ ವೃತ್ತದಲ್ಲಿ ಬಾಲಗಂಗಧಾರನಾಥ ಶ್ರೀಗಳ 76ನೇ ವರ್ಷದ ಜಯಂತ್ಯುತ್ಸವ ಮತ್ತು 8ನೇ ವರ್ಷ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ನಂತರ ಮಾಯಗಾನಹಳ್ಳಿ ಬಳಿ ಕೆಎಂಎಫ್ ಮಾಜಿ ಅಧ್ಯಕ್ಷ ಪಿ. ನಾಗರಾಜು ನೂತನ ಸಚಿವರನ್ನು ಸನ್ಮಾನಿಸಿದರು.

ರಾಮನಗರ ಬಿಜಿಎಸ್ ವೃತ್ತದಲ್ಲಿನ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT