ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ್ಡಪ್ಪನಹಳ್ಳಿಯ ಕಾಲುವೆಯಲ್ಲಿ ನಿಂತ ನೀರು

Last Updated 1 ಮೇ 2020, 9:08 IST
ಅಕ್ಷರ ಗಾತ್ರ

ಸೂಲಿಬೆಲೆ: ಸೂಲಿಬೆಲೆ ಗಿಡ್ಡಪ್ಪನಹಳ್ಳಿ ಮುಖ್ಯ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಕಾಲುವೆಯ ನೀರು ಮುಂದೆ ಹರಿಯಲು ಯಾವುದೇ ಕಾಲುವೆ ಅಥವಾ ಪರ್ಯಾಯ ವ್ಯವಸ್ಥೆ ಇಲ್ಲದೆ ಕಾಲುವೆಯಲ್ಲಿ ನೀರು ನಿಲ್ಲುತ್ತಿದೆ.

ಸೂಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಬೆಲೆ-ಗಿಡ್ಡಪ್ಪನಹಳ್ಳಿ ಮುಖ್ಯ ರಸ್ತೆಯಲ್ಲಿ, ನರೇಗಾ ಕಾಮಗಾರಿಯಡಿಯಲ್ಲಿ 2019-20ನೇ ಸಾಲಿನಲ್ಲಿ ಸುಮಾರು ₹ 9.95 ಲಕ್ಷಗಳ ಅಂದಾಜು ವೆಚ್ಚದಲ್ಲಿ ರಸ್ತೆ ಬದಿಯಲ್ಲಿ ಕಾಲುವೆ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಶೇ 50ರಷ್ಟು ನೀರು ಈ ಕಾಲುವೆಗೆ ಹರಿಯುತ್ತದೆ. ಆದರೆ ಕಾಲುವೆ ನಿರ್ಮಾಣವಾಗಿರುವ ತನಕ ನೀರು ಬಂದು ಅಲ್ಲಿಂದ ಮುಂದೆ ಹರಿಯಲು ಜಾಗ ಇಲ್ಲ. ಕಾಮಗಾರಿಗೆ ಬಳಸಿರುವ ನೈಸರ್ಗಿಕ, ಮಾನವ ಹಾಗೂ ಆರ್ಥಿಕ ಸಂಪನ್ಮೂಲ ನಿಷ್ರಯೋಜಕವಾಗಿದೆ.

ಕಾಲುವೆ ಕಾಮಗಾರಿಯನ್ನು ಮುಂದುವರೆಸಿದರೆ, ಕಾಲುವೆಯ ನೀರು ನೇರ ಕೆರೆಗೆ ಸಂಪರ್ಕವಿರುವ ದೊಡ್ಡ ಕಾಲುವೆಗೆ ಹರಿಯುತ್ತದೆ. ಇದರಿಂದ ಕೆರೆಗೆ ನೀರು ಸಂಗ್ರಹವಾಗಿ ಅಂತರ್ಜಲದ ವೃದ್ಧಿಯಾಗಲು ಪೂರಕವಾಗುತ್ತದೆ. ಈಗಾಗಲೇ ಮಳೆ ಆರಂಭ ಆಗಿರುವುದರಿಂದ ತುರ್ತಾಗಿ ಕಾಮಗಾರಿಯನ್ನು ಮುಂದುವರೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT